ತಗ್ಗುಪ್ರದೇಶ ಮುಳುಗಡೆ

bhramhavara
ರಾಷ್ಟ್ರೀಯ ಹೆದ್ದಾರಿ 66 ಉಪ್ಪೂರು ಬಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತ ನೆರೆ ನೀರು ಆವರಿಸಿರುವುದು.
Published on

ಬ್ರಹ್ಮಾವರ: ಕಳೆದ ಕೆಲವು ದಿನದಿಂದ ಸುರಿಯುತ್ತಿರುವ ಭಾರಿ ಮಳೆಗೆ ಬ್ರಹ್ಮಾವರ ಭಾಗದಲ್ಲಿ ಹರಿಯುವ ಸೀತಾನದಿ, ಸ್ವರ್ಣ ಮತ್ತು ಮಡಿಸಾಲು ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿದ್ದು ತಗ್ಗುಪ್ರದೇಶ ಸಂಪೂರ್ಣ ಜಲಾವೃತವಾಗಿದೆ.

ಇಲ್ಲಿನ ಕುದ್ರು ಪ್ರದೇಶ ಮತ್ತು ನದಿ ತೀರದಲ್ಲಿರುವ ಮನೆಗಳ ಪ್ರಾಂಗಣದಲ್ಲಿ ನೀರು ತುಂಬಿಕೊಂಡಿದ್ದು, ಕೆಲವು ಭಾಗದಲ್ಲಿ ಜಲದಿಗ್ಬಂಧನ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಉಪ್ಪೂರು ಬಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತ ನೆರೆ ನೀರು ಆವರಿಸಿದೆ.
ನದಿ ತೀರದ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದ್ದು, ಕಳೆದ 15 ದಿನದಿಂದ ಗದ್ದೆಯಲ್ಲಿ ನೀರು ತುಂಬಿ ಭತ್ತದ ನಾಟಿ ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net