

ದೇವರಹಿಪ್ಪರಗಿ: ಪಟ್ಟಣದಲ್ಲಿನ ಹೆಸ್ಕಾಂ ಶಾಖೆಯ ಗ್ರಾಹಕರ ದೂರುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ದೂರು ನೋಂದಾಯಿಸುವ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಇಂಡಿ ಹೆಸ್ಕಾಂ ಇಇ ಎಸ್.ಎ.ಬಿರಾದಾರ ಹೇಳಿದರು.
ಪಟ್ಟಣದ ಹೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಗ್ರಾಹಕರ ದೂರು ನೋಂದಾಯಿಸುವ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣದ ವಿದ್ಯುತ್ ಪೂರೈಕೆ ಸೇರಿದಂತೆ ಯಾವುದೇ ಅಡತಡೆಗಳು ಹಾಗೂ ತ್ವರಿತ ಕ್ರಮಗಳಿಗಾಗಿ ದೂರು ನೋಂದಾವಣಿ ಕೇಂದ್ರ ಆರಂಭಗೊಂಡಿದೆ. ಗ್ರಾಹಕರು ಮೊ. ಸಂಖ್ಯೆ 9480883024 ಗೆ ಕರೆ ಮಾಡಿ ದೂರು ಸಲ್ಲಿಸಿ ತಕ್ಷಣವೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈಗಾಗಲೇ ಕಂಪನಿಯಿಂದ 24*7 ವಿದ್ಯುತ್ ತುರ್ತು ರಿಪೇರಿ ಸೇವೆಗೆ ಸಿಬ್ಬಂದಿ ಹಾಗೂ ವಾಹನವನ್ನು ನೀಡಲಾಗಿದೆ ಎಂದರು.
ಇಂಡಿ ಹೆಸ್ಕಾಂ ಎಇಇ ವಿಜಯಕುಮಾರ ಹವಾಲ್ದಾರ್ ಮಾತನಾಡಿ, ವಿದ್ಯುತ್ ಸೇವೆಗಳು ಹಾಗೂ ಸಿಬ್ಬಂದಿ ಅಗತ್ಯತೆ ಕುರಿತು ತಿಳಿಸಿದರು.
ದೇವರಹಿಪ್ಪರಗಿ ಹೆಸ್ಕಾಂ ಎಇಇ ಗಂಗಾಧರ ಲೋಣಿ, ಸಿಂದಗಿ ಎಇಇ ಚಂದ್ರಕಾಂತ ನಾಯಕ, ಸಿಂದಗಿ ಎಇ ಎಸ್.ಎನ್.ಗೌಡರ, ಶಾಖಾಧಿಕಾರಿಗಳಾದ ಉಮೇಶ ಪಟ್ಟಣ, ಅಶೋಕ ಕಂದಗಲ್, ಮೇಲ್ವಿಚಾರಕ ಶಿವಾನಂದ ಜಗನ್ನಾಥ, ಅಬ್ಬಾಸಲಿ ಅಗಸಿ, ದೇವೇಂದ್ರ ಯಾಳಗಿ, ಸದಾಶಿವ ನಿಂಗಪ್ಪ, ಸಂತೋಷ ಸಜ್ಜನ, ಅರವಿಂದ ರಾಠೋಡ, ಶ್ರೀಶೈಲ ನಾವಿ, ಹರೀಶ ಬಿರಾದಾರ, ಬಸಯ್ಯ ಹಿರೇಮಠ, ಮಲ್ಲನಗೌಡ ಪಾಟೀಲ, ಆರ್.ಎಸ್.ಭಜಂತ್ರಿ, ಸದ್ದಾಂ ಕೊರಬು, ಈರಯ್ಯ ಹಿರೇಮಠ, ಪ್ರದೀಪ ಹಿರೇಮಠ, ಆನಂದ ಪಾಟೀಲ, ಮಲ್ಲನಗೌಡ ಬಿರಾದಾರ, ಪ್ರಭುಗೌಡ ಬಗಲಿ, ಮಹೇಶ ವಗ್ಗರ, ತೌಸ್ೀ, ಸುರೇಶ ನಡಗೇರಿ, ಅಶೋಕ ಫಿರಂಗಿ, ಗಾಲೀಬ್ ಕೊಕಟನೂರ ಹಾಗೂ ವಿದ್ಯುತ್ ಗುತ್ತಿಗೆದಾರರಾದ ವಸಂತ ನಾಡಗೌಡ, ಕಾಶೀನಾಥ ಹಿರೇಮಠ, ಸಿದ್ದನಗೌಡ ಪಾಟೀಲ ಭಾಗವಹಿಸಿದ್ದರು.