ತಕ್ಷಣ ಮಾಸಾಶನ ಮಂಜೂರು ಮಾಡಿ

Capture2
Published on

ಭಾಲ್ಕಿ: ಮಾಸಾಶನಕ್ಕಾಗಿ ಎಂಟು ವರ್ಷಗಳಿಂದ ಅಲೆದಾಡುತ್ತಿದ್ದ ಅಂಗವಿಕಲ ಯುವಕನೊಬ್ಬನ ಸಮಸ್ಯೆಗೆ ಶಾಸಕ ಈಶ್ವರ ಖಂಡ್ರೆ ಸ್ಪಂದಿಸಿದ್ದಾರೆ. ಮೋರಂಬಿ ಗ್ರಾಮದ ಸಂತೋಷ ಕೊಟರಗೆ(26)ಗೆ ಎರಡು ದಿನದಲ್ಲಿ ಮಾಸಾಶನ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಮೋರಂಬಿಯಲ್ಲಿ ಶನಿವಾರ ಗ್ರಾಮಸ್ಥರು ಶಾಸಕರ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಕಾರ್ಯಕ್ರಮ ಬಳಿಕ ಜನರ ಸಮಸ್ಯೆ ಆಲಿಸಿ ಕಾರು ಹತ್ತುತ್ತಿರುವಾಗ ವಾಕರ್ ಸಹಾಯದಿಂದ ಯುವಕ ನಿಂತಿದ್ದನ್ನು ಕಂಡ ಖಂಡ್ರೆ, ಸಕರ್ಾರದ ಸವಲತ್ತು, ಮಾಸಾಶನ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಸಂತೋಷ ಬಲಗಾಲು ಸ್ವಾಧೀನ ಕಳೆದುಕೊಂಡು ಎಂಟು ವರ್ಷವಾಗಿದೆ. ಮಾಸಾಶನಕ್ಕಾಗಿ ಅಲೆದಾಡುತ್ತಿದ್ದು, ಇದುವರೆಗೆ 15-20 ಸಾವಿರ ರೂ. ಖಚರ್ು ಮಾಡಿಕೊಂಡಿದ್ದೇನೆ. ಆದರೆ ಯಾರೂ ಮಾಸಾಶನ ಮಂಜೂರು ಮಾಡಿಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡ. ಸ್ಥಳದಲ್ಲೇ ಶಾಸಕರು ದೂರವಾಣಿ ಮೂಲಕ ತಹಸೀಲ್ದಾರ್ ಜತೆ ಮಾತನಾಡಿ ಎರಡು ದಿನದಲ್ಲಿ ಮಾಸಾಶನ ಮಂಜೂರು ಮಾಡಿಕೊಡುವಂತೆ ಸೂಚನೆ ನೀಡಿದರು. ಶಶಿಧರ ಕೋಸಂಬೆ, ಸಂಗಮೇಶ ಹುಣಜೆ ಮದಕಟ್ಟಿ, ರಾಜಕುಮಾರ ಬಿರಾದಾರ, ಟಿಂಕು ರಾಜಭವನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net