ತಂಬಾಕು ಸೇವನೆ ಸಾವಿಗೆ ಆಹ್ವಾನ

29 NMG 03
Published on

ನಾಗಮಂಗಲ: ತಂಬಾಕು, ಬೀಡಿ, ಸಿಗರೇಟ್ ಸೇವನೆ ಎಂದರೆ ಅದು ಸಾವನ್ನು ಆಹ್ವಾನಿಸಿದಂತೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಸನ್ನ ಹೇಳಿದರು.

ಪಟ್ಟಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ತಂಬಾಕು ನಿಯಂತ್ರಣ ಕೋಶ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುಲಾಬಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ತಂಬಾಕು, ಬೀಡಿ ಹಾಗೂ ಸಿಗರೇಟ್ ಪ್ಯಾಕ್ ಮೇಲೆಯೇ ‘ಆರೋಗ್ಯಕ್ಕೆ ಹಾನಿಕಾರಕ’ ಎಂದು ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಗಿರುತ್ತದೆ. ಆದರೂ ವ್ಯಸನಿಗಳು ಅದನ್ನು ಸೇವಿಸುತ್ತಿರುವುದು ದುರಾದೃಷ್ಟಕರ ಎಂದರು. ಹಿರಿಯ ಆರೋಗ್ಯ ನಿರೀಕ್ಷಕ ಸಿದ್ದಲಿಂಗಪ್ಪ, ಎಎಸೈ ಸಿದ್ದರಾಜು, ಆರೋಗ್ಯ ಇಲಾಖೆ ಸಿಬ್ಬಂದಿ ಸತ್ಯಪ್ರಕಾಶ್, ಬಸಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net