ತಂಬಾಕು ಬೆಳೆ ಪರಿಶೀಲನೆ

24ark1
ಅರಕಲಗೂಡು ತಾಲೂಕಿನ ಕೂಡಲೂರು ಗ್ರಾಮದಲ್ಲಿ ಹೊಗೆಸೊಪ್ಪು ಬೆಳೆ ಜಮೀನಿಗೆ ರಾಮನಾಥಪುರ ತಂಬಾಕು ಮಾರುಕಟ್ಟೆ ಕ್ಷೇತ್ರಾಧಿಕಾರಿ ಬಸವರಾಜು ಭೇಟಿ ನೀಡಿ ಪರಿಶೀಲಿಸಿದರು.
Published on

ಅರಕಲಗೂಡು: ಬೆಳವಣಿಗೆ ಹಂತದ ಗಿಡಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಸಿಂಪಡಿಸಿದರೆ ಗುಣಮಟ್ಟದ ಹೊಗೆಸೊಪ್ಪು ಉತ್ಪಾದಿಸಬಹುದು ಎಂದು ರಾಮನಾಥಪುರ ತಂಬಾಕು ಮಾರುಕಟ್ಟೆ ಕ್ಷೇತ್ರಾಧಿಕಾರಿ ಬಸವರಾಜು ಸಲಹೆ ನೀಡಿದರು.

ತಾಲೂಕಿನ ಮೂಲೇಹೊಸಹಳ್ಳಿ, ಶಿರದನಹಳ್ಳಿ, ಬಿಳಗೂಲಿ ಮತ್ತು ಕೂಡಲೂರು ಗ್ರಾಮದ ರೈತರ ಹೊಗೆಸೊಪ್ಪು ಹೊಲಗಳಿಗೆ ಇತ್ತೀಚೆಗೆ ಭೇಟಿ ನೀಡಿ ಗಿಡದ ಬೆಳವಣಿಗೆ ಪರಿಶೀಲಿಸಿ ಮಾತನಾಡಿದ ಅವರು, ಕಡಿಕಡ್ಡಿ, ಹೇನುಕರೆ, ಸೊರಗು ರೋಗ ಕಾಣಿಸಿಕೊಂಡಿರುವ ಗಿಡಗಳಿಗೆ ತಕ್ಷಣ ಔಷಧ ಸಿಂಪಡಿಸಬೇಕು. ಇದರಿಂದ ರೋಗ ಹೆಚ್ಚು ಹರಡುವುದನ್ನು ತಡೆಗಟ್ಟುವ ಮೂಲಕ ಕಾಯಿಲೆ ಹತೋಟಿಗೆ ತರಬಹುದು ಎಂದರು.

ಹೊಗೆಸೊಪ್ಪು ಬೆಳೆಗೆ ಎರಡನೇ ಹಂತದಲ್ಲಿ ನೀಡುವ ರಸಗೊಬ್ಬರವನ್ನು ಗಿಡದ ಎರಡು ಕಡೆ ಗುಣಿ ಮಾಡಿ ಹಾಕಬೇಕು. 40 ರಿಂದ 50 ಹಾಗೂ 50ರಿಂದ 55 ದಿನದ ಹೊಗೆಸೊಪ್ಪು ಗಿಡಗಳಿಗೆ ಬೆಳೆ ಬೆಳವಣಿಗೆ ನೋಡಿಕೊಂಡು ಪೊಟ್ಯಾಷಿಯಂ ನೈಟ್ರೈಟ್ ಔಷಧ ಕಡ್ಡಾಯವಾಗಿ ಸಿಂಪಡಿಸಬೇಕು. ಇದರಿಂದ ಗಿಡಗಳ ರೋಗ ನಿರೋಧಕ ಶಕ್ತಿ ವೃದ್ಧಿಸಿ ಎಲೆಗಳು ಬೇಗನೆ ಹಣ್ಣಾಗುವುದನ್ನು ತಡೆಗಟ್ಟಿ ಹಳದಿ ಬಣ್ಣಕ್ಕೆ ತಿರುಗಿ ಗುಣಮಟ್ಟದ ತಂಬಾಕು ಉತ್ಪಾದಿಸಲು ನೆರವಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net