

ಕಲಬುರಗಿ: ನಗರದ ಸೇರಿ ಜಿಲ್ಲೆಯ ವಿವಿಧೆಡೆ ಶನಿವಾರ ಬಿರುಗಾಳಿ ಸಹಿತ ಅಬ್ಬರದ ಮಳೆ ಸುರಿದು ಬಿಸಿಲ ಬೇಗೆಯಿಂದ ಕಾದು ಕೆಂಡವಾಗಿದ್ದ ನಗರಕ್ಕೆ ಮಳೆರಾಯ ತಂಪೆರೆದ.
ಶನಿವಾರ ಮಧ್ಯಾಹ್ನ ೧ಗಂಟೆಗೆ ಕಾರ್ಮೋಡ, ಗುಡುಗು, ಸಿಡಿಲಿನೊಂದಿಗೆ ಆರಂಭವಾದ ಮಳೆಯೂ ಸುಮಾರು ಒಂದುವರೆ ಗಂಟೆವರೆಗೆ ಸತತ ಸುರಿಯಿತು. ಮಳೆ, ಗಾಳಿ ರಬಸಕ್ಕೆ ನಗರದ ಸಿಬಿಐ ಕಾಲನಿಯಲ್ಲಿನ ಬೃಹತ್ ಬೇವಿನ ಮರದ ಕೊಂಬೆ ಮುರಿದು ಕೆಳಗೆ ನಿಂತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ಯಾವುದೇ ಅಪಾಯಗಳು ಸಂಭವಿಸಿಲ್ಲ.
ಮಳೆಯಿAದ ನಗರದ ಲಾಲ್‌ಗೇರಿ ಕ್ರಾಸ್ ಬಳಿಯ ಜನತಾ ಲೇಔಟ್, ಮಹಾಲಕ್ಷಿö್ಮÃ ಲೇಔಟ್, ಕಲ್ಯಾಣ ನಗರ, ನೂತನ ವಿದ್ಯಾಲಯ ಎದುರಿನ ರಸ್ತೆ, ಜಿಲ್ಲಾ ಕೋರ್ಟ್ ಪಕ್ಕ, ಅನ್ನಪೂರ್ಣ ಕ್ರಾಸ್, ಡಾ.ಎಸ್.ಎಂ.ಪAಡಿತ ರಂಗಮAದಿರ, ಸಿದ್ದಿಬಾಷಾ ದರ್ಗಾ, ಹಳೇ ಜೇವರ್ಗಿ ರಸ್ತೆಯ ರೈಲ್ವೆ ಕೆಳಸೇತುವೆ ಸೇರಿ ವಿವಿಧೆಡೆ ರಸ್ತೆಯಲ್ಲಿ ಮೊಳಕಾಲು ಮಟ್ಟದಲ್ಲಿ ನೀರು ಸಂಗ್ರಹವಾಗಿ ಸಂಚಾರಕ್ಕೆ ತೊಡಕಾಯಿತು.
ತುಂಬಿ ಹರಿದ ಚರಂಡಿಗಳು: ದಿಢೀರ್ ಮಳೆಗೆ ನಗರದ ವಿವಿಧೆಡೆ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಯಲ್ಲಿ ಹರಿದವು. ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರ, ಮಹಾಲಕ್ಷ್ಮೀ ಲೇಔಟ್ ಸೇರಿ ವಿವಿಧೆಡೆ ಬೃಹತ್ ಚರಂಡಿಗಳಲ್ಲಿ ಮಳೆ ನೀರು ಸೇರಿದ್ದರಿಂದು ಚರಂಡಿ, ರಸ್ತೆ ಮಧ್ಯೆ ವ್ಯತ್ಯಾಸವೇ ಗೊತ್ತಾಗದಷ್ಟು ನೀರು ಹರಿಯಿತು. ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛ ಮಾಡದಿರುವುದು ಇದಕ್ಕೆ ಕಾರಣ ಎಂದು ಮಹಾಲಕ್ಷ್ಮೀ ಲೇಔಟ್‌ನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.