

ಕಲಬುರಗಿ: ಜಿಲ್ಲೆಯಲ್ಲಿ ಮುಂಗಾರು ಮಳೆ ಭರ್ಜರಿ ಪ್ರವೇಶವನ್ನೇ ನೀಡಿದೆ. ಎಲ್ಲ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದ್ದು, ಬಿತ್ತನೆಗೆ ಚಾಲನೆ ಸಿಕ್ಕಂತಾಗಿದೆ. ಸಧ್ಯದ ಮಳೆಯಿಂದಾಗಿ ರೈತವರ್ಗ ಸಂತಸದಲ್ಲಿದ್ದಾರೆ.
ಕಳೆದ 24 ಗಂಟೆಯಲ್ಲಿ ಸಾಮಾನ್ಯ ಮಳೆಗಿಂತ ಹೆಚ್ಚು ಸುರಿದಿದೆ. ಸಾಮಾನ್ಯ ಮಳೆ 5 ಮಿ.ಮೀ ಇದ್ದರೆ 19 ಮಿ.ಮೀ ಮಳೆ ಬಿದ್ದಿದೆ, ಅಫಜಲಪುರ 4, ಆಳಂದ 6, ಚಿಂಚೋಳಿ 7, ಚಿತ್ತಾಪುರ 4, ಕಲಬುರಗಿ 4, ಜೇವರ್ಗಿ 7, ಸೇಡಂ 5, ಕಾಳಗಿ 3, ಕಮಲಾಪುರ 5,
ಯಡ್ರಾಮಿ 3, ಶಹಾಬಾದ್ 1 ಮಿ.ಮೀ ಮಳೆಯಾಗಿದೆ.
ಏಳು ದಿನಗಳಲ್ಲಿ ಜಿಲ್ಲೆಯಲ್ಲಿ ಸಾಮಾನ್ಯ ಮಳೆ 31 ಮಿ.ಮೀ ಇದ್ದರೆ, 37 ಮಿ.ಮೀ ಮಳೆ ಸುರಿದಿದೆ. ಜನವರಿಯಿಂದ ಮೇವರೆಗೆ ಸಾಮಾನ್ಯ ಮಳೆ 67 ಮಿ.ಮೀ ಇದ್ದರೆ 65 ಮಿ.ಮೀ ಮಳೆ ಬಿದ್ದಿದೆ. ಜೂನ್ 1ರಿಂದ 17ರವರೆಗೆ 62 ಮಿ.ಮೀ ಸಾಮಾನ್ಯ ಮಳೆ ಇದ್ದರೆ 70 ಮಿ.ಮೀ ಮಳೆ ಸುರಿದಿದೆ. ಒಟ್ಟಾರೆ ಈವರೆಗೆ 129 ಮಿ.ಮೀ ಸಾಮಾನ್ಯ ಮಳೆ ಇದ್ದರೆ 135 ಮಿ.ಮೀ ಮಳೆ ಸುರಿದಿದೆ.
ಜಿಲ್ಲೆಯ ಕೆಲವೆಡೆ ಬಿತ್ತನೆ ಕಾರ್ಯ ಈಗಾಗಲೇ ಶುರುವಾಗಿದೆ. ಈವರೆಗೆ ಶೇ.10ರಷ್ಟು ಬಿತ್ತನೆ ಆಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಕಲಬುರಗಿ ಮಹಾನಗರದಲ್ಲಿ ಬೆಳಗ್ಗೆ ಮತ್ತು ಸಂಜೆ ಮಳೆ ಸುರಿಯುತ್ತಿದ್ದು, ತಂಪಾದ ವಾತಾವರಣ ಸೃಷ್ಟಿಯಾಗಿದೆ. ಕೊಳವೆ ಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳ ಸಾಧ್ಯವಾಗಲಿದೆ. ಇನ್ನೊಂದೆಡೆ ಕರೊನಾ ಭಯದಲ್ಲಿರುವ ಜನ ಗಾಬರಿಗೊಂಡಿದ್ದಾರೆ. ಮಳೆಗಾಲದಲ್ಲಿ ಕರೊನಾ ಪ್ರಕರಣ ಹೆಚ್ಚಾಗಲಿವೆ ಎಂಬ ವರದಿಯಿಂದಾಗಿ ಜನ ಬೆಚ್ಚಿಬಿದ್ದಿದ್ದಾರೆ.
ರಸ್ತೆ, ತಗ್ಗುದಿನ್ನೆಗಳು ಮಳೆಯಿಂದಾಗಿ ಜಲಾವೃತಗೊಂಡಿವೆ. ಜನ, ವಾಹನ ಸಂಚಾರಕ್ಕೆ ಕೆಲ ಕಾಲ ಬ್ರೇಕ್ ಬಿದ್ದಿತ್ತು. ಮನೆಯಲ್ಲಿದ್ದ ಕೊಡೆ, ರೇನ್ಕೋಟ್ಗಳು ಹೊರಬಿದ್ದಿವೆ.
ಮುಂಗಾರು ಮಳೆ ಚೆನ್ನಾಗಿ ಶುರುವಿಟ್ಟುಕೊಂಡಿದೆ. ಬಿತ್ತನೆ ಕಾರ್ಯ ಅಲ್ಲಲ್ಲಿ ಶುರುವಾಗಿದ್ದರೂ ಇನ್ಮುಂದೆ ಬಿತ್ತನೆ ಕಾರ್ಯದಲ್ಲಿ ಚುರುಕು ಕಾಣಲಿದೆ. ಬೀಜ, ಗೊಬ್ಬರ ಸೇರಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡಾ.ರಿತೇಂದ್ರನಾಥ ಸುಗೂರ, ಜಂಟಿ ಕೃಷಿ ನಿದರ್ೇಶಕ,
ಕಲಬುರಗಿ.