ತಂಪರೆದ ಮಳೆರಾಯ

rain
Published on

ಬಳ್ಳಾರಿ : ಗಣಿನಾಡು ಬಳ್ಳಾರಿಯ ವಿವಿಧಡೆ ಗಾಳಿ ಸಹಿತ ಗುರುವಾರ ಸಂಜೆ ಮಳೆ ಸುರಿಯಿತು. ಬಿಸಿಲಿನ ಝಳದಿಂದ ಬೆಂದಿದ್ದ ಜನರಿಗೆ ಒಂದಿಷ್ಟು ತಂಪರೆದಂತಯಿತು. ಬೆಳ್ಳಿಗೆಯಿಂದಲೇ ಆಗೆಮ್ಮೆ ಈಗೆಮ್ಮೆ ಮೋಡ ಕವಿದ ವಾತಾವರಣವು ಮಳೆ ಬರಬಹುದು ಎಂಬ ಮುನ್ಸೂಚನೆ ನೀಡಿತ್ತು. ಸಂಜೆಯ ಸಾಧಾರಣ ಮಳೆಯಿಂದಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಮಳೆಗೆ ಸಿಲುಕಿ ತೊಂದರೆ ಅನುಭವಿಸಿದರು. ಕೆಲವರು ರಸ್ತೆಯ ಬದಿಯ ಕಟ್ಟಡಗಳ ಬಳಿ ಆಶ್ರಯ ಪಡೆದರೆ, ಉಳಿದವರು ನೆನೆದುಕೊಂಡೇ ಮಳೆಯನ್ನು ಆನಂದಿಸಿಕೊಂಡು ನಡೆದುಕೊಂಡು ಸಾಗಿದರು. ಬೀಸಿದ ಬಿರುಗಾಳಿಯಿಂದ ನಗರದ ಕೆಲ ಕಡೆ ರಸ್ತೆಗಳಲ್ಲಿ ಪಕ್ಕದಲ್ಲಿ ಹಾಕಲಾಗಿದ್ದ ಮಳಿಗೆಗಳ ಶೀಟ್‌ಗಳು ನೆಲಕ್ಕೆ ಉರುಳಿದವು. ಇಲ್ಲಿನ ಸುಧಾ ಕ್ರಾಸ್, ದುರ್ಗಮ್ಮ ಗುಡಿ ವೃತ್ತ, ರಾಯಲ್ ವೃತ್ತ, ಸಂಗಮ್ ವೃತ್ತ ಸೇರಿದಂತೆ ವಿವಿಧಡೆ ಮಳೆ ಸುರಿಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net