ತಂದೆಯೊಂದಿಗೆ ಸಂಬಂಧ ಬೇರೆ, ಸೈದ್ಧಾಂತಿಕ ನಿಲುವು ಬೇರೆ

15MYS621 BJP PRESS MEET
Published on

ಬಿಜೆಪಿ ಸೇರ್ಪಡೆ ಹಠಾತ್ ಬೆಳವಣಿಗೆಯಲ್ಲ. 8 ವರ್ಷಗಳ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಬಂದಿರುವೆ. ಬಿಜೆಪಿಯಲ್ಲಿ ಯುವ ಜನರಿಗೆ ಹೆಚ್ಚಿನ ಅವಕಾಶವಿದೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕವೀಶ್‌ಗೌಡ ಹೇಳಿದರು


ಕಾಂಗ್ರೆಸ್‌ನಲ್ಲಿರುವ ತಂದೆ ಮಾಜಿ ಶಾಸಕ ವಾಸು ಅವರೊಂದಿಗೆ ವೈಯಕ್ತಿಕ ಸಂಬಂಧ ಬೇರೆ, ಸೈದ್ಧಾಂತಿಕ ನಿಲುವು ಬೇರೆ. ಅವರು ಅವರ ಪಕ್ಷದ ಪರ ಕೆಲಸ ಮಾಡುತ್ತಾರೆ, ನಾನು ನನ್ನ ಪಕ್ಷದ ಪರ ಕೆಲಸ ಮಾಡುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net