ತಂದೆಯಿಂದಲೇ ಮಗನ ಕೊಲೆ ಯತ್ನ ದನ ಕಟ್ಟುವ ವಿಚಾರದಲ್ಲಿ ತಕರಾರು

IMG-20210622-WA0010
Published on

ಮಂಗಳೂರು: ನಗರದ ಹೊರ ವಲಯದ ಜಪ್ಪಿನಮೊಗರು ಕೊಪ್ಪರಿಗೆಗುತ್ತು ಎಂಬಲ್ಲಿ ತಂದೆಯೇ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಸ್ವಾಮಿತ್ವ ಶೆಟ್ಟಿ ಸುಟ್ಟ ಗಾಯಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ತಂದೆ ವಿಶ್ವನಾಥ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮನೆಯಲ್ಲಿ ದನ ಕಟ್ಟುವ ವಿಚಾರದಲ್ಲಿ ತಂದೆ ಮಗನ ನಡುವೆ ವಾಗ್ವಾದವಾಗಿದೆ. ಈ ಸಂದರ್ಭದಲ್ಲಿ ಮಗನ ಕೊಲೆಗೆ ಯತ್ನಿಸಲಾಗಿದೆ. ಆರೋಪಿಯ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net