ತಂದೆಯನ್ನೇ ಕೊಂದ ಮಗ

Crime Logo
Published on

ಹನೂರು: ತಾಲೂಕಿನ ಸಂದನಪಾಳ್ಯ ಗ್ರಾಮದಲ್ಲಿ ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಮಗನೇ ತಂದೆಯನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ.

ಗ್ರಾಮದ ಪಾಕಿಯಾನಾಥನ್ (54) ಹತ್ಯೆಯಾದವ. ಮಗ ಜಾನ್‌ಸನ್ ಜೀವ (33) ಕೊಲೆ ಮಾಡಿದವ. ಚಾಲಕ ವೃತ್ತಿ ಮಾಡುತ್ತಿರುವ ಜಾನ್‌ಸನ್ ಜೀವ ಇದೇ ಗ್ರಾಮದ ಗಾಯತ್ರಿ ಎಂಬುವರನ್ನು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಇದೆ. ವಿವಾಹದ ಆರಂಭದಲ್ಲಿ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಇತ್ತೀಚೆಗೆ ಹೆಂಡತಿ ಹಾಗೂ ತನ್ನ ತಂದೆ ನಡುವೆ ಅನೈತಿಕ ಸಂಬಂಧವಿದೆ ಎಂದು ಅನುಮಾನ ವ್ಯಕ್ತಪಡಿಸಿ ಮನೆಯಲ್ಲಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಕುಟುಂಬಸ್ಥರು ಅನುಮಾನಪಡುವುದು ಬೇಡ ಎಂದು ಬುದ್ಧಿವಾದ ಹೇಳಿದರೂ ಅದನ್ನು ಲೆಕ್ಕಿಸದೆ ಜಾನ್‌ಸನ್ ಜೀವ ಭಾನುವಾರ ರಾತ್ರಿ ಸುಮಾರು 8 ಗಂಟೆ ಸುಮಾರಿನಲ್ಲಿ ಜಗಳ ತೆಗೆದು ಮನೆಯ ಮುಂಭಾಗ ಮಂಚದ ಮೇಲೆ ಕುಳಿತಿದ್ದ ತಂದೆಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ತಂದೆ ಮೃತಪಟ್ಟಿದ್ದಾರೆ.

ಮೃತನ ಸಹೋದರ ಮದಲೈಸ್ವಾಮಿ ರಾಮಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ಡಾ. ಟಿ.ಬಿ. ಕವಿತಾ ಹಾಗೂ ಇನ್‌ಸ್ಪೆೆಕ್ಟರ್ ಚಿಕ್ಕರಾಜಶೆಟ್ಟಿ ಭೇಟಿ ನೀಡಿ ಕುಟುಂಬಸ್ಥರಿಂದ ಮಾಹಿತಿ ಪಡೆದು ಪರಿಶೀಲಿಸಿದರು. ಸೋಮವಾರ ಮೃತದೇಹವನ್ನು ಚಾ.ನಗರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರಿಗೆ ನೀಡಲಾಯಿತು. ಆರೋಪಿ ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net