

ಯಾದಗಿರಿ: ಕನಸು ಗುರಿಯಾಗಬೇಕೆ ಹೊರತು ಗುರಿ ಕನಸಾಗಬಾರದು, ಸಮಯಪಾಲನೆಯಿಂದ ಅಭ್ಯಾಸ ಮಾಡುವುದು ಬಹುಮುಖ್ಯ ಎಂದು ಜಿಲ್ಲಾಕಾರಿ ಸ್ನೇಹಲ್ ಆರ್., ಸಲಹೆ ನೀಡಿದರು.
ಶುಕ್ರವಾರ ಇಲ್ಲಿನ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಹೆಜ್ಜೆಗೊಂದು ದಾರಿ ಶಿರ್ಷಿಕೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ಪಠ್ಯ ವಿಷಯಗಳ ಜತೆಗೆ ಪ್ರಪಂಚದ ಜ್ಞಾನ ತಿಳಿದುಕೊಳ್ಳಬೇಕು ಎಂದರು.
ಬಹು ಆಸಕ್ತಿಯಿಂದ ವಿದ್ಯಾರ್ಥಿ ವಿವಿಧ ಪ್ರಶ್ನೆಗಳನ್ನು ಕೇಳುತ್ತಾ ಅವರ ಭವಿಷ್ಯದ ಗುರಿಗಳು ಮತ್ತು ಅಭಿಲಾಷೆಗಳನ್ನು ಅರಿತುಕೊಂಡರು. ತಂದೆ,ತಾಯಿಯರ ಕನಸನ್ನು ನನಸು ಮಾಡುವುದು ಪ್ರತಿ ಮಕ್ಕಳ ಕರ್ತವ್ಯ ಸರ್ಕಾರ ನಿಮಗೆ ಸಾಕಷ್ಟು ಸೌಲಭ್ಯ ನೀಡುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸರ್ಕಾರಿ ಕರ್ತವ್ಯದ ಬಗ್ಗೆ ಸೂಕ್ತ ಮಾಹಿತಿ ಪಡೆದ ವಿದ್ಯಾಥರ್ಿಗಳು ತಮ್ಮ ಪರಿಚಯದ ಜತೆಗೆ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪರಿಚಯ ಮಾಡಿಕೊಂಡು, ಜಿಲ್ಲಾಡಳಿತದ ಕಾರ್ಯ ವೈಖರಿ, ಜನರು ಯಾವ ಯಾವ ಕೆಲಸಕ್ಕಾಗಿ ಜಿಲ್ಲಾಡಳಿತ ಭವನಕ್ಕೆ ಬರುತ್ತಾರೆ, ಇಲ್ಲಿನ ಜಿಲ್ಲಾ ಮಟ್ಟದ ಅಕಾರಿಗಳು ಕಾರ್ಯಗಳ ಬಗ್ಗೆ ತಿಳಿಸಿದರು.
ಉತ್ತಮ ನಡೆತೆ, ಉತ್ತಮ ಗುಣಗಳಿಂದ ನಾಯಕತ್ವ ಬರಲು ಸಾಧ್ಯವಾಗುತ್ತದೆ. ಯುಪಿಎಸ್ಸಿ ಪರೀಕ್ಷೆಗಳು ಹಾವು ಏಣಿ ಆಟದಂತೆ. ಸಾಕಷ್ಟು ಪರಿಶ್ರಮಪಟ್ಟರೆ ಮಾತ್ರ ಯಶಸ್ಸು ಸಿಗಲು ಸಾಧ್ಯ. ನಿಮಗೆ ಇಂಗ್ಲಿಷ್ ಬರುವುದಿಲ್ಲವೆಂದು ಕೀಳರಿಮೆ ಬೇಡ, ಸಾಧನೆ ಮಾಡುತ್ತೇನೆ ಎಂಬ ಛಲವಿರಬೇಕು ಎಂದರು.
ಡಿಡಿಪಿಐ ಶಾಂತಗೌಡ ಪಾಟೀಲ್, ಕಾರ್ಯಕ್ರಮದ ಸಂಘಟಕರಾದ ಬಸಣ್ಣಗೌಡ ಆಲ್ದಾಳ, ವಿಷಯ ಪರಿವೀಕ್ಷಕ ಹಣಮಂತ, ರಾಜೇಂದ್ರಕುಮಾರ ಇದ್ದರು.