ತಂದೆ ಹಂತಕನಿಗೆ 6 ವರ್ಷ ಸಜೆ -ಕುಡಿತಕ್ಕೆ ಹಣ ಕೊಡದಿದ್ದಕ್ಕೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದ ಪಾಪಿ

arrest-696x465_20230709000956420.jpg
Published on

ದಾವಣಗೆರೆ: ತಂದೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಹಂತಕನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 6 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10ಸಾವಿರ ರೂ.ಗಳ ದಂಡ ವಿಧಿಸಿದೆ.

ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ಕೂಲಿ ಕಾರ್ಮಿಕ ನರಸಿಂಹಪ್ಪ ಶಿಕ್ಷೆಗೆ ಗುರಿಯಾದ ಅಪರಾಧಿ. ಮದ್ಯವ್ಯಸನಿಯಾಗಿದ್ದ ನರಸಿಂಹಪ್ಪನಿಗೆ ಪಾಲಕರು ತಮಗೆ ಬಂದಿದ್ದ ವೃದ್ಧಾಪ್ಯವೇತನದ ಹಣ ನೀಡದ್ದಕ್ಕೆ 2022ನೇ ವರ್ಷದ ಏಪ್ರಿಲ್ ಏಳರಂದು ತಂದೆ ಮಂಜಪ್ಪ (65)ಅವರನ್ನು ಕೊಲೆ ಮಾಡಿದ್ದ.

ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು..

ಅಂದಿನ ಸಿಪಿಐ ಟಿ.ವಿ ದೇವರಾಜ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿಜಯಾನಂದ ಅವರು ತೀರ್ಪು ಪ್ರಕಟಿಸಿದರು.

ಅಪರಾಧಿಯು ದಂಡ ಕಟ್ಟಲು ತಪ್ಪಿದಲ್ಲಿ ೩ ತಿಂಗಳ ಹೆಚ್ಚುವರಿ ಸಾಧಾ ಶಿಕ್ಷೆ ವಿಧಿಸಿಯೂ ಆದೇಶಿಸಿದರು.ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸತೀಶ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net