

ತಂದೆ ಮಾಡಿದ್ದ ಸಾಲಕ್ಕೆ ಮಗನ ಅಪಹರಣ!
ಚಿಕ್ಕೋಡಿ: ತಂದೆ ಮಾಡಿದ್ದ ಸಾಲಕ್ಕೆ ಮಗನನ್ನ ಕಿಡ್ನ್ಯಾಪ್ ಮಾಡಿರುವ ಘಟನೆ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದು ತಡವಾಗಿ ಬೆಳಕಿಗೆ ಬಂದಿದೆ.
ಹುಕ್ಕೇರಿ ತಹಶೀಲ್ದಾರ ಕಚೇರಿಯ ಸಿಪಾಯಿ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಗ್ರಾಮದ ಬಸಪ್ಪ ಕೋತಗಿ ಎಂಬಾತನ ಅಪಹರಣಕಾರರು ಎರಡು ದಿನ ಅಪಹರಿಸಿದ್ದರು.3 ಲಕ್ಷ ಹಣ ನೀಡುವಂತೆ ಅಪಹರಣಕಾರರ ಒತ್ತಾಯಿಸಿ
ಹಣ ನೀಡುವಂತೆ ಬಸಪ್ಪ ಸಹೋದರ ರಾಮಪ್ಪ ಕೋತಗಿಗೆ ಕರೆ ಮಾಡಿದ್ದರು.
ಕರೆ ಬಳಿಕ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುವಷ್ಟರಲ್ಲೆ ಅಪಹರಣಾಕಾರರಿಂದ ಬಸಪ್ಪ ತಪ್ಪಿಸಿಕೊಂಡು ಓಡಿ ಬಂದಿದ್ದಾನೆ.ಬಳಿಕ ಹುಕ್ಕೇರಿ ಪೊಲೀಸರು ಆತನನ್ನ ರಕ್ಷಣೆ ಮಾಡಿದ್ದಾರೆ.
ಕೃಷ್ಣಾ ಬಸಪ್ಪ ವಂಟಮೂರಿ ಹಾಗೂ ಸಹಚರರರು ನನನ್ನ ಕಿಡ್ನ್ಯಾಪ್ ಮಾಡಿದ್ದರು ಎಂದು ಬಸಪ್ಪ ಆರೋಪಿಸಿದ್ದು , ಕೃಷ್ಣಾ ಬಳಿ 60 ಸಾವಿರ ರೂ ನಮ್ಮ ತಂದೆ ಸಾಲ ಪಡೆದಿದ್ದರು.ಬಡ್ಡಿ ಅಸಲು ಸೇರಿಸಿ 3 ಲಕ್ಷ ನೀಡುವಂತೆ ನನ್ನನ್ನ ಅಪಹರಿಸಿ ಅಪಹರಣಕಾರರು ಒತ್ತಾಯಿಸಿದ್ದರು.ಪ್ರಕರಣ ದಾಖಲಾದರೂ ಅಪಹರಣಾಕಾರರನ್ನ ಬಂಧಿಸಿಲ್ಲ ಎಂದು ಆರೋಪಿಸಿದ್ದಾನೆ.