ತಂದೆ, ತಾಯಿಯವರಿಗೆ ಗೌರವ ತನ್ನಿ

Published on

ಸಿರಿಗೆರೆ: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚು ಗಮನ ಹರಿಸಿ ತಂದೆ-ತಾಯಿಗಳಿಗೆ ಗೌರವ ತರುವ ನಿಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಆಲಘಟ್ಟ ಗ್ರಾಪಂ ಅಧ್ಯಕ್ಷ ಕೆ.ಎಂ.ನಾಗರಾಜಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.
ಸಮೀಪದ ಆಲಘಟ್ಟ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆ, ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಆಲಘಟ್ಟ ಪ್ರಾಥಮಿಕ ಶಾಲಾ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಆಲಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಮಾತನಾಡಿದರು. ಕನ್ನಡ ಶಿಕ್ಷಕ ಚನ್ನಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ತಿಪ್ಪೇಸ್ವಾಮಿ, ಶೇಖರ್, ಮುಖ್ಯ ಶಿಕ್ಷಕರಾದ ರಮೇಶ್, ಮಂಜುನಾಥ್, ಶಿವಕುಮಾರ್, ತಿಮ್ಮಾರೆಡ್ಡಿ, ಈಶ್ವರಪ್ಪ,ದುರ್ಗೇಶ್, ಚಂದ್ರಪ್ಪ, ನಿರ್ಮಲಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋವಿಂದರಾಜ್, ತಿಮ್ಮರಾಜ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರಾದ ರಾಮಪ್ಪ, ನಿರ್ಮಲಾ, ರತ್ನಮ್ಮ, ಗ್ರಾಮದ ಯುವ ಮುಖಂಡ ವಿಜಯ್ ಕುಮಾರ್, ಪತ್ರಕರ್ತರಾದ ಆನಂದ್.ಡಿ ಆಲಘಟ್ಟ,ಅಭಿಷೇಕ್, ಸುಮನ್, ರಾಘವೇಂದ್ರ,ಪ್ರೀತಂ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net