ತಂದೆ-ತಾಯಿಗೆ ಮಕ್ಕಳ ಅಗೌರವ

Nimbal Shri
Published on
  • ಕಲಬುರಗಿ: ನಾಯಿಗಳಿಗೆ ತೋರುವ ಪ್ರೀತಿ, ಮಮತೆ ನಮಗೆ ಜನ್ಮ ನೀಡಿದ ತಂದೆ, ತಾಯಿಗಳಿಗೆ ತೋರದಿರುವುದು ವಿಷಾದನೀಯ ಎಂದು ಮೌನಯೋಗಿ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.
    ಬೆಂಗಳೂರಿನ ಸಮಾಧಾನ ಆಶ್ರಮದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಯುಗಾದಿ ಹೊಸ ವರ್ಷದ ಸಂಭ್ರಮ ಮಹೋತ್ಸವದಲ್ಲಿ ಭಕ್ತರನ್ನು ಉz್ದೆÃಶಿಸಿ, ಆಶೀರ್ವಚನ ನೀಡಿದ ಶ್ರೀಗಳು, ನಾವು ಒಂದೆರಡು ಮಕ್ಕಳಿಗೆ ಜನ್ಮ ನೀಡಿ ಶಿP್ಷÀಣ ನೀಡುತ್ತೇವೆ. ಆದರೆ ಸಂಸ್ಕಾರ ನೀಡುತ್ತಿಲ್ಲ. ಮಕ್ಕಳು ತಮ್ಮ ಪಾಡಿಗೆ ತಾವಿದ್ದು, ತಂದೆ- ತಾಯಿಯನ್ನು ವೃz್ದÁಶ್ರಮಕ್ಕೆ ಬಿಟ್ಟು ಕಾರಿನಲ್ಲಿ ನಾಯಿ ಕೂರಿಸಿಕೊಂಡು ಹೋಗುತ್ತಿz್ದÁರೆ. ಹೀಗೆ ನಡೆದುಕೊಳ್ಳುವುದು ಮನುಷ್ಯತ್ವ ಅಲ್ಲ. ನಮ್ಮ ಜೀವನ ಪದ್ದತಿ ಬದಲಾಯಿಸಿದ ಪರಿಣಾಮ ಪ್ರಕೃತಿಯೂ ಮುನಿಸಿಕೊಂಡು ಬರ, ಅತಿವೃಷ್ಟಿ ಎದುರಿಸಬೇಕಾಗಿದೆ ಎಂದು ಪೂಜ್ಯರು ಮಾರ್ಮಿಕವಾಗಿ ನುಡಿದರು.
    ಮನುಷ್ಯರಾದ ನಾವು ದೊಡ್ಡವರಾಗಬೇಕೆಂದರೆ ಉತ್ತಮ ವಾತಾವರಣ, ಉತ್ತಮ ಗೆಳೆತನ, ಉತ್ತಮ ಮಾತುಕತೆ, ನಿರ್ಮಲ ಮನಸ್ಸು ಹೊಂದಿರಬೇಕು. ನರೇಂದ್ರ ಮೋದಿ ದೇಶದ ಪ್ರಧಾನಿಯಾದರೂ ತಾಯಿ ಬಳಿ ಬಂದು ಆಗಾಗ ಕೈ ತುತ್ತು ಊಟ ಮಾಡುತ್ತಿದ್ದರು. ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದರು. ನಮ್ಮ ಹಿರಿಯರು ನಡೆದುಕೊಂಡು ಬಂದ ದಾರಿ ಯಾವತ್ತೂ ಮರೆಯಬಾರದು ಎಂದರು.
    ಸನಾತನ ಧರ್ಮ ಬಗ್ಗೆ ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಿz್ದÉÃವೆ. ಆದರೆ ಆಚರಣೆಯಲ್ಲಿ ತರುತ್ತಿಲ್ಲ. ಹಾನಗಲï ಕುಮಾರಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸದಿದ್ದರೆ ಲಿಂಗಾಯತ, ವೀರಶೈವ ಸಮುದಾಯ ಸಂಘಟನೆಯಾಗುತ್ತಿರಲಿಲ್ಲ. ಶಿವಯೋಗ ಮಂದಿರದ ಸ್ಥಾಪಿಸದಿದ್ದರೆ ನಾಡಿನ ಮಠ, ಮಂದಿರಗಳಿಗೆ ಮಹಾಸ್ವಾಮಿಗಳು ದೊರಕುವುದು ಕಷ್ಟವಾಗುತ್ತಿತ್ತು ಎಂದು ವಿವರಿಸಿದರು.
    ಜಡೆ ಹಿರೇಮಠದ ಪೂಜ್ಯ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆದರೆ ಒಂದು ಶಕ್ತಿ ದೊರೆಯುತ್ತದೆ. ಪ್ರಮುಖವಾಗಿ ಸಮಾಧಾನವೆಂಬ ರಕ್ಷಾ ಕವಚ ಹಾಕಿಕೊಳ್ಳಬೇಕು ಎಂದರು. ಗೊಗ್ಗೆಹಳ್ಳಿ ಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮೂಡಿ ಸದಾಶಿವ ಮಹಾಸ್ವಾಮಿಗಳು ಮಾತನಾಡಿದರು.
    ಸಮಾಧಾನದಲ್ಲಿ ಪೂಜ್ಯರು ಉಪಯೋಗಿಸಿದ ಸಾಮಾನುಗಳ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯಕ್ಕೆ ಅಡಿಗಲು ನೆರವೇರಿಸಲಾಯಿತು.
    ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಘಟಕದ ಅಧ್ಯP್ಷÀ ಶರಣು ಮೋದಿ, ಹಿರಿಯ ಆಯುರ್ವೇದ ತಜ್ಞ ಡಾ.ಎಚ್. ಹನುಮಂತರಾಯ ಇತರರಿದ್ದರು.
    ಶಿವಾನಂದ ಬಿರಾಜದಾರ ಪ್ರಾಸ್ತಾವಿಕ ಮಾತನಾಡಿದರು. ಹೇಮಾ ಸಂದೀಪ ಹಾಗೂ ಕೃಷಿ ಅಧಿಕಾರಿ ಮಹೇಶ ನಿರೂಪಿಸಿದರು. ವರ್ಷಕ್ಕೊಮ್ಮೆ ಯುಗಾದಿ ದಿನದಂದು ಮಾತ್ರ ಮಾತನಾಡುವ ಪೂಜ್ಯರ ವಾಣಿಯ ಸಂದೇಶ ಕೇಳಲು ದೇಶದ ವಿವಿಧ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net