

ಸಂಕೇಶ್ವರ: ನಿಮ್ಮ ಶ್ರೇಯಸ್ಸಿಗೆ ಸದಾ ಶ್ರಮಿಸುವ ನಿಮ್ಮ ತಂದೆ-ತಾಯಿಗಳೇ ನಿಮ್ಮ ಹೀರೋಗಳಾಗಬೇಕು ಎಂದು ಹಾಸ್ಯ ಕಲಾವಿದ ನರಸಿಂಹ ಜೋಶಿ ಹೇಳಿದರು.
ಸಮೀಪದ ನಿಡಸೋಸಿ ಪಾಲಿಟೆಕ್ನಿಕ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಹಳೆಯ ವಿದ್ಯಾರ್ಥಿ ಮತ್ತು ಸೆಕ್ಯೂರಿಟಿ ಡೇಟಾ ಸೈಂಟಿಸ್ಟ್ ಶಿವರಾಜ ಮೂಲಿಮನಿ ಮಾತನಾಡಿ, ನಿಮ್ಮ ಕನಸಿನ ಉದ್ಯೋಗ ಪಡೆಯಬೇಕಾದರೆ ಸ್ಪಷ್ಟತೆ, ಹಠ ಮತ್ತು ಉದ್ಯೋಗಕ್ಕೆ ಬೇಕಾದ ಕೌಶಲ ನಿಮ್ಮಲ್ಲಿರಬೇಕು ಎಂದರು.
ಪ್ರಾಚಾರ್ಯ ಪ್ರೊ.ಬಿ.ಆರ್. ಉಮರಾಣೆ ವಾರ್ಷಿಕ ವರದಿ ಓದಿದರು. ಬಸವರಾಜ ಖೋತ ಅಧ್ಯಕ್ಷತೆ ವಹಿಸಿದ್ದರು. ಹಿರಾಶುಗರ್ಸ್ ನಿರ್ದೇಶಕ ಪ್ರಭುದೇವ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ದಾನೇಶ್ವರಿ ಹೊಸಮಠ, ಅಭಿಷೇಕ ಮಜ್ಜಗಿ, ದಾನೇಶ್ವರಿ ಉದೋಶಿ, ವಿಜಯ ಮಹಾಂತೇಶ, ತೇಜಸ ಕುಲಕರ್ಣಿ, ತೇಜಸ್ವಿನಿ ಕಂಠಿ ಇದ್ದರು.