

ಲಕ್ಷ್ಮೇಶ್ವರ: ಭಾರತದ ಭವಿಷ್ಯ ವಿಜ್ಞಾನದ ಬೆಳವಣಿಗೆಗಳನ್ನು ಮೇಲೆ ಅವಲಂಭಿಸಿದೆ. ರಾಷ್ಟ್ರದ ಸರ್ವಾಂಗೀಣ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳು ಆಗಬೇಕಿದೆ. ಈ ನಿಟ್ಟಿನಲ್ಲಿ ದೇಶದ ಯುವ ವಿಜ್ಞಾನಿಗಳ ಪಾತ್ರ ಮಹತ್ವ ಪೂರ್ಣವಾಗಿದೆ ಎಂದು ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಹೇಳಿದರು.
ಪಟ್ಟಣದ ಚಂದನ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜ್ಞಾನ ವಿಸõತ ಕಾರ್ಯಕ್ರಮ ಮತ್ತು ವಿಜ್ಞಾನ ಉಪಕರಣಗಳ ಪಾರ್ಕ್ ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನ ಅನೇಕ ಶ್ರೇಷ್ಠ ವಿಜ್ಞಾನಿಗಳು ಗ್ರಾಮೀಣ ಪ್ರದೇಶದಿಂದಲೇ ಬಂದವರು. ಅವರ ಸಾಧನೆಗೆ ಏಕಾಗ್ರತೆ, ಪರಿಶ್ರಮ, ಸಮರ್ಪಣಾ ಮನೋಭಾವ ಕಾರಣವಾಗಿದೆ. ಇಚೀನಾ, ಅಮೆರಿಕ, ರಷ್ಯಾದಂತಹ ದೇಶಗಳ ವಿಜ್ಞಾನಿಗಳು ಈ ಗುಣಗಳನ್ನು ಅಳವಡಿಸಿಕೊಂಡಿದ್ದರಿಂದಲೇ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಸಾಧ್ಯವಾಗಿದೆ. ವಿಜ್ಞಾನ ಕ್ಷೇತ್ರಕ್ಕೆ ದೇಶ, ಭಾಷೆ, ಬಡವ ಶ್ರೀಮಂತ, ಜಾತಿ, ಮತ ಭೇದ ಇಲ್ಲ. ಇದೊಂದು ಅನಂತವಾದ ಕ್ಷೇತ್ರವಾಗಿದ್ದು, ಸಾಧನೆ ಸಾಧಕರ ಸ್ವತ್ತಾಗಿದೆ ಎಂದರು.
ದೇಶದ ಮಹಾನ್ ತಪಸ್ವಿಗಳಾದ ಗೌತಮ ಬುದ್ಧ, ಶಂಕರಾಚಾರ್ಯರು ಮತ್ತು ಮಹಾತ್ಮ ಗಾಂಧೀಜಿ ಅವರು ನಿಜವಾದ ದೇವರಾಗಿದ್ದು, ಅವರ ತತ್ತ್ವ ಸಿದ್ಧಾಂತಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆಯ ಶಿಖರವೇರಬೇಕು. ಭಾರತದ ಗ್ರಾಮೀಣ ಪ್ರದೇಶದ ಮಕ್ಕಳಿಂದಲೆ ದೇಶಕ್ಕೆ ಭವಿಷ್ಯವಿದ್ದು, ಅವರಿಗೆ ವೈಜ್ಞಾನಿಕ ಮನೋಭಾವದ ಶಿಕ್ಷಣ ನೀಡಬೇಕಿದೆ ಎಂದರು.
ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್. ಕಿರಣಕುಮಾರ ಮಾತನಾಡಿ, ವಿಜ್ಞಾನ ಇಂದು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಹಾಸು ೊಕ್ಕಾಗಿದೆ. ವಿದ್ಯಾರ್ಥಿಗಳಲ್ಲಿ ವ್ಯಜ್ಞಾನಿಕ ಮನೋಭಾವ ಬೆಳೆಸಿ ಅವರ ಪ್ರತಿಭೆಯನ್ನು ಗುರುತಿಸಿ, ಕ್ಷಮತೆಯನ್ನು ಹೆಚ್ಚಿಸುವ ಕಾರ್ಯವನ್ನು ಶಿಕ್ಷಕ ಮತ್ತು ಪಾಲಕರು ಮಾಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಕ್ಷಮತೆಯನ್ನು ಶ್ರದ್ಧೆ, ನಿಷ್ಠೆ, ಪರಿಶ್ರಮದ ಮೂಲಕ ಬಳಸಿಕೊಂಡು ಸಾಧನೆ ಮಾಡಬೇಕು ಎಂದರು.
ಇದೇ ವೇಳೆ ಸಿಎನ್ಆರ್ ರಾವ್ ದಂಪತಿ ಚಂದನ ಶಾಲೆಗೆ 15 ಲಕ್ಷ ರೂ. ಚೆಕ್ ನೀಡಿ ಈ ಹಣವನ್ನು ಡಿಪಾಸಿಟ್ ಮಾಡಿ ಬರುವ ಬಡ್ಡಿ ಹಣವನ್ನು ಪ್ರತಿವರ್ಷ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನೀಡುವಂತೆ ತಿಳಿಸಿದರು. ಶಾಲಾ ಅಭಿವೃದ್ಧಿಗಾಗಿ 1 ಲಕ್ಷ ರೂ.ಗಳ ಚೆಕ್ ನೀಡಿದರು.
ಬಳಿಕ ನಡೆದ ಚಂದನ ಸ್ಪಂದನ ಸಂವಾದ ಕಾರ್ಯಕ್ರಮದಲ್ಲಿ ಚಂದನ ಶಾಲೆ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಕೇಳಿದ ವಿಜ್ಞಾನದ ಕೌತುಕಗಳ ಪ್ರಶ್ನೆಗಳಿಗೆ ಸಿಎನ್ಆರ್ ರಾವ್, ಶ್ರೀಮತಿ ಇಂಧುಮತಿ ರಾವ್, ಎ.ಎಸ್. ಕಿರಣಕುಮಾರ ಉತ್ತರಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಟಿ. ಈಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನಿಗಳಾದ ಎಸ್.ಎನ್. ಭಟ್, ಎಸ್.ಎಂ. ಶಿವಪ್ರಸಾದ್, ಜಿ.ಯು. ಕುಲಕರ್ಣಿ, ಉದಯರಂಗಾ, ಎಂ. ಈಶ್ವರ ಮೂರ್ತಿ, ಎನ್.ಎಸ್. ವಿದ್ಯಾಧಿರಾಜ, ಗೋವಿಂದರಾಜು, ಶೀಬಾ ವಾಸು, ವಿನಾಯಕ ಪತ್ತಾರ, ನಿರ್ದೇಶಕ ಎಚ್.ಸಿ. ರಟಗೇರಿ, ಜನಪ್ರತಿನಿಧಿಗಳು ಇದ್ದರು. ವಿದ್ಯಾರ್ಥಿಗಳಾದ ರಿಯಾನ್ವುಲೀಕ್, ನವ್ಯಾ, ಅಭಿಷೇಕ, ವಂದನಾ, ಸ್ನೇಹಾ, ವಿಕಾಸ ನಿರೂಪಿಸಿದರು.