ತಂತ್ರಜ್ಞಾನ ಯುಗದಲ್ಲಿ ಕನ್ನಡ ಬಳಕೆ ಅಗತ್ಯ

14 ckm 5
ಚಿಕ್ಕಮಗಳೂರಿನ ಜ್ಯೋತಿನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಉದ್ಘಾಟಿಸಿದರು.
Published on

ಚಿಕ್ಕಮಗಳೂರು: ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಕಂಪ್ಯೂಟರ್‌ನಲ್ಲಿ ಕನ್ನಡ ತಂತ್ರಾAಶವನ್ನು ಬಳಸುವುದು ಅಗತ್ಯ. ಇಲ್ಲದಿದ್ದಲ್ಲಿ ಕನ್ನಡಕ್ಕೆ ಹಿನ್ನಡೆಯಾಗುತ್ತದೆ ಎಂದು ಬಸವನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಅಭಿಪ್ರಾಯಪಟ್ಟರು.

ನಗರದ ಜ್ಯೋತಿನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿರಿಗನ್ನಡಂ ಗೆಲ್ಗೆ ಎನ್ನುವುದು ಇಂದು ಸರಿಗನ್ನಡಂ ಗೆಲ್ಗೆ ಎಂದಾಗಬೇಕಾಗಿದೆ. ವಿದ್ಯಾರ್ಥಿ ದಿಸೆಯಲ್ಲಿ ಕನ್ನಡವನ್ನು ಸಮರ್ಪಕವಾಗಿ ಕಲಿಯುವುದೇ ಅವರು ಕನ್ನಡಕ್ಕೆ ಮಾಡುವ ಸೇವೆ. ಮಕ್ಕಳು ಕನ್ನಡವನ್ನು ಬಳಸುವಾಗ ಹಿರಿಯರು ಗಮನಿಸಬೇಕಾಗುತ್ತದೆ ಎಂದು ಸಲಹೆ ನೀಡಿದರು.

ಪಂಪ, ರನ್ನರಂತಹ ಕವಿಗಳ ಭವ್ಯ ಪರಂಪರೆಯ ವಾರಸುದಾರರು ಇಂದಿನ ಮಕ್ಕಳು. ಈ ಕಾರಣಕ್ಕಾಗಿಯೇ ಕನ್ನಡವನ್ನು ಪ್ರೀತಿಸಬೇಕು. ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆ ಬಹಳ ಪರಿಣಾಮಕಾರಿ. ಓದು, ವಿದ್ಯೆ ಮಕ್ಕಳಲ್ಲಿ ವಿವೇಕ ಮತ್ತು ಆತ್ಮಗೌರವವನ್ನು ಜಾಗೃತಿಗೊಳಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲಿ ಓದುವುದೇ ಅವರು ಮಾಡುವ ದೇಶ ಸೇವೆ ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದರು ಎಂದರು.

ಮಕ್ಕಳು ಮುಂದೆ ತಾವು ಏನಾಗಿ ರೂಪುಗೊಳ್ಳಬೇಕು ಎಂಬುದಕ್ಕೆ ಈಗಲೇ ಸಂಕಲ್ಪ ಮಾಡಬೇಕು ಎನ್ನುವುದನ್ನು ರಾಷ್ಟçಕವಿ ಕುವೆಂಪುರವರು ಅವರ ಮಕ್ಕಳಿಗೆ ಕಥೆಯ ಮುಖಾಂತರ ನೀಡಿದ್ದಾರೆ. ಇದೇ ಪಾಠಗಳೇ ಮುಂದೆ ತೇಜಸ್ವಿಯವರು ಕಾಡು, ಕಾಡು ಪ್ರಾಣಿಗಳು, ಪ್ರಕೃತಿ ಈ ಬಗ್ಗೆಯೇ ತಿಳಿದುಕೊಳ್ಳಬೇಕು ಹಾಗೂ ಬೆಳೆಯಬೇಕು ಎಂದು ಸಂಕಲ್ಪ ಮಾಡಲು ಕಾರಣವಾಯಿತು. ಕರ್ನಾಟಕಕ್ಕೆ ೫೦ ವರ್ಷಗಳು ತುಂಬಿ ಸುವರ್ಣ ಸಂಭ್ರಮದಲ್ಲಿರುವ ಜೊತೆಯಲ್ಲೇ ದ.ರಾ.ಬೇಂದ್ರೆಯವರ `ನಾಕು ತಂತಿಗಳು ಗೆ ಜ್ಞಾನಪೀಠ ಪ್ರಶಸ್ತಿ ಪಡೆದು ಐವತ್ತು ವರ್ಷಗಳಾಗಿವೆ. ಅಂತೆಯೇ ಕುವೆಂಪು ಅವರು ರಾಷ್ಟçಕವಿ ಪ್ರಶಸ್ತಿ ಪಡೆದು ಐವತ್ತು ವರ್ಷಗಳು ಸಂದಿವೆ. ಹೀಗೆ ಸುವರ್ಣ ಸಂಭ್ರಮದೊAದಿಗೆ ಅನೇಕ ಸಂಭ್ರಮಗಳು ಸೇರಿವೆ ಎಂದು ತಿಳಿಸಿದರು.

ಮಹಾತ್ಮಾ ಗಾಂಧೀಜಿಯವರು ಬೆಂಗಳೂರಿನ ನಂದಿ ಬೆಟ್ಟದಲ್ಲಿ ತಂಗಿದ್ದಾಗ ೮ನೇ ತರಗತಿ ವಿದ್ಯಾರ್ಥಿ ವಸುದೇವ ಭೂಪಾಳಂ ಕನ್ನಡದಲ್ಲಿಯೇ ಅವರಿಂದ ಆಟೋಗ್ರಾಫ್ ಪಡೆದಾಗ ಮಹಾತ್ಮಾ ಗಾಂಧೀಜಿಯವರು ಕನ್ನಡದ ಬಗ್ಗೆ ಅತ್ಯಂತ ಅಭಿಮಾನ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ನಗರಸಭೆ ಸದಸ್ಯೆ ಕವಿತಾ ಶೇಖರ್, ಮಾತನಾಡಿ ಕನ್ನಡ ನಾಡಿನ ವೈಭವ ಹಾಗೂ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ಎಸ್.ಶಾಂತಕುಮಾರಿ ಅವರು ದಿನದ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಆಡಳಿತ ಮಂಡಳಿ ಖಜಾಂಚಿ ಎಂ.ಪುAಡರೀಕಾಕ್ಷ ಉಡುಪ, ಡಾ.ಡಿ.ಪಿ.ಮೋಹನ್ ಹಾಗೂ ಶಾಲೆಯ ಪ್ರಾಚಾರ್ಯರಾದ ಹೇಮ ಎಸ್.ಆರ್. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net