

ರಾಯಬಾಗ: ಪ್ರಯಾಣಿಕರ ಅನುಕೂಲಕ್ಕಾಗಿ ಬೇಡಿಕೆಯಂತೆ ತಂಗುದಾಣ ನಿರ್ಮಿಸಲಾಗುತ್ತದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಶ್ರೀನಗರ ಹಾಗೂ ತಾಲೂಕಿನ ಮೇಖಳಿ ಗ್ರಾಮದ ಆದರ್ಶ ವಿದ್ಯಾಲಯ ಹತ್ತಿರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ ೫ ಲಕ್ಷ ರೂ. ಅನುದಾನದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ತಂಗುದಾಣ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಜಿಪಂ ಎಇಇ ಎಸ್.ಎಸ್.ಹೊಸಮನಿ, ಪಿ.ಎ.ನಾಯಿಕ, ಸಂಜು ಒಡೆಯರ, ಸದಾಶಿವ ಘೋರ್ಪಡೆ, ಸಂಗಣ್ಣ ದತ್ತವಾಡೆ, ಚಿದಾನಂದ ಚೌಗಲಾ, ಪುಂಡಲೀಕ ಪೂಜಾರಿ, ವಸಂತ ಲಬ್ಬೆ, ಬಸು ನಾಯಿಕ, ಸುನೀಲ ಕಿಚಡೆ, ಸದಾನಂದ ಹಳಿಂಗಳಿ, ನಾರಾಯಣ ಮೇತ್ರಿ, ಅಶೋಕ ಮೇತ್ರಿ, ಕೆಂಚಪ್ಪ ಧರ್ಮಟ್ಟಿ, ಸುರೇಶ ಮಾಳಿ, ಪರಶುರಾಮ ಪೂಜೇರಿ, ಸುಭಾಷ ಕಾಂಬಳೆ, ರಿತೇಶ ಅವಳೆ, ಸೋಮ ಭಜಂತ್ರಿ, ಮಹಾದೇವ ಹೊಸಮನಿ, ವಿಠ್ಠಲ ಪೂಜಾರಿ, ಮುರಸಿದ್ಧ ನಾಯ್ಕ, ನೇಹಲ ಮಾಳಿ ಇತರರಿದ್ದರು.