ತಂಗಲಿ ಗ್ರಾಪಂಗೆ ಕೆ.ಆರ್.ಗಿರೀಶ್ ಅಧ್ಯಕ್ಷ

kdr gp
ಕಡೂರು ತಾಲೂಕಿನ ತಂಗಲಿ ಗ್ರಾಪಂ ಅಧ್ಯಕ್ಷ ಕೆ.ಆರ್.ಗಿರೀಶ್, ಉಪಾಧ್ಯಕ್ಷೆ ಆರತಿ ಅವರನ್ನು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಭಿನಂದಿಸಿದರು. ಲೋಕೇಶ್ ಬಾಬು, ಧನಂಜಯ ಇತರರಿದ್ದರು.
Published on

ಕಡೂರು: ತಂಗಲಿ ಗ್ರಾಪಂ ಅಧ್ಯಕ್ಷರಾಗಿ ಕೆ.ಆರ್.ಗಿರೀಶ್, ಉಪಾಧ್ಯಕ್ಷರಾಗಿ ಆರತಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾ ಅಧಿಕಾರಿಯಾಗಿ ಕೃಷಿ ಸಹಾಯಕ ನಿರ್ದೇಶಕ ಅಶೋಕ್ ಕಾರ್ಯನಿರ್ವಹಿಸಿದರು.

ಅಭಿನಂದನಾ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಿರುವ ಗ್ರಾಪಂ ಆಡಳಿತ ಮಂಡಳಿಯ ಒಗ್ಗಟ್ಟಿನಿಂದಾಗಿ ಸುಸಜ್ಜಿತ ಗ್ರಾಪಂ ಕಟ್ಟಡ ನಿರ್ಮಾಣ ಮಾಡಲಾಗಿದೆ. ಹಳ್ಳಿಗಳಿಗೆ ಎಲ್ಲ ಸೌಕರ್ಯ ಕಲ್ಪಿಸಲು ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಆದ್ಯತೆ ಕೊಡಲಿ ಎಂದರು.

ಅಧ್ಯಕ್ಷ ಕೆ.ಆರ್.ಗಿರೀಶ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರ ಪಡೆದು ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡುತ್ತೇನೆ ಎಂದರು.

ಕಾವೇರಿಬಾಯಿ ಕೃಷ್ಣನಾಯ್ಕ, ಗಂಗಾಧರನಾಯ್ಕ, ಎಸ್.ಜ್ಯೋತಿ, ಪರಮೇಶ್ವರಪ್ಪ, ರಘುರಾಮ್, ಎನ್.ಜಿ.ಸುಧಾ, ಮುಖಂಡರಾದ ಎನ್.ಲೋಕೇಶ್ ಬಾಬು, ಧನಂಜಯ್, ಶಂಕರ್, ಚಿನ್ನರಾಜು, ಪಿಡಿಒ ಸುನೀಲ್, ಸುಶ್ಮಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net