ಢೋಹರ ಕಕ್ಕಯ್ಯ ಪಲ್ಲಕ್ಕಿ ಉತ್ಸವ ನಾಳೆ

images (1)
Published on

ಕಲಬುರಗಿ: ಶ್ರೀ ಶರಣ ಢೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ನಿಂದ ನಗರದ ಜಗತ್ ಬಡಾವಣೆಯಲ್ಲಿನ ಢೋಹರ ಕಕ್ಕಯ್ಯ ದೇವಸ್ಥಾನದ ಜೀಣೋದ್ಧಾರದ ಉದ್ಘಾಟನೆ ನಿಮಿತ್ತ ಆ.೨೬ರಂದು ಬೆಳಗ್ಗೆ ೮.೩೦ಕ್ಕೆ ಪಲ್ಲಕ್ಕಿ ಉತ್ಸವ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಸಾಯಬಣ್ಣ ಮಸಾಜಿ ಹೋಳ್ಕರ್ ತಿಳಿಸಿದ್ದಾರೆ.
ಬೆಳಗ್ಗೆಯಿಂದ ವಿಶೇಷ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದ್ದೂರಿ ಪಲ್ಲಕ್ಕಿ ಮೆರವಣಿಗೆ ನಂತರ ಬೃಹತ್ ಸಮಾರಂಭವನ್ನು ಏರ್ಪಡಿಸಿದ್ದು ಬೀರನಳ್ಳಿಯ ಗುರುಮಾತಾ ನಂದಾತಾಯಿ, ಮಾತೋಶ್ರೀ ಪ್ರಭಾಶ್ರೀ, ಮಾತೋಶ್ರೀ ಡಾ.ದ್ರಾಕ್ಷಾಯಣಿ ಅಪ್ಪ ಸಾನ್ನಿಧ್ಯ ವಹಿಸಲಿದ್ದಾರೆ. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸಮತಿ ಖೂಬಾ ನೇತೃತ್ವ ವಹಿಸಲಿದ್ದಾರೆ. ಮೇಯರ್ ಯಲ್ಲಪ್ಪ ನಾಯ್ಕೋಡಿ ಉದ್ಘಾಟಿಸಲಿದ್ದು, ಸಾಯಬಣ್ಣ ಮಸಾಜಿ ಹೋಳ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸೊಲ್ಲಾಪುರ ಸಂಸದ ಪ್ರಣಿತಿ ಶಿಂಧೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಖನೀಜ್ Áತಿಮಾ, ಬಸವರಾಜ ಮತ್ತಿಮಡು, ವಿಠಲ್ ಕಟಕದೊಂಡ, ಜ್ಞಾನದೇವ ಚೌಗುಲೆ ಸೇರಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಮಲ್ಲಿಕಾರ್ಜುನ ಖರಟಮಲ್, ಮೋತಿಲಾಲ್ ಕಟಕೆ, ಅಶೋಕ ಮಸಾಜಿ ಶಿಂಧೆ, ರಮೇಶ ಗಾಯದನಕರ್, ದೇವಿಂದ್ರ ದಡಕೆ, ಬಾಬುರಾವ ಕಟಕೆ, ನಾಗರಾಜ, ರಮೇಶ ಗಾಯದನಕರ್, ಸಾಯಬಣ್ಣ ಗಾಜರೆ ಸೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net