ಢೋಹರ ಕಕ್ಕಯ್ಯ ಜಾತ್ರೆ 26ರಂದು

images
Published on

ಕಲಬುರಗಿ: ಶರಣ ಢೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ನಿಂದ ನಗರದ ಜಗತ್ ವೃತ್ತದಲ್ಲಿನ ಶ್ರೀ ಢೋಹರ ಕಕ್ಕಯ್ಯ ಜಾತ್ರಾ ಮಹೋತ್ಸವ ಫೆ.೨೬ರಂದು ನಡೆಯಲಿದ್ದು, ಸಂಜೆ ೪ಕ್ಕೆ ಅದ್ದೂರಿ ಪಲ್ಲಕ್ಕಿ ಉತ್ಸವ ನೆರವೇರಲಿದೆ. ಸಂಜೆ ೬ಕ್ಕೆ ಧರ್ಮಸಭೆ ನಡೆಯಲಿದೆ. ಮಾತೋಶ್ರೀ ಪ್ರಭುಶ್ರೀ ತಾಯಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೋಳ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಬಸವರಾಜ ಮತ್ತಿಮಡು, ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್ ಸೇರಿ ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಜನಾ ಸೇವೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net