

ತುಮಕೂರು : ಕರೊನಾ ವೈರಸ್ ನಿಗ್ರಹಿಸಲು ಜಿಲ್ಲಾದ್ಯಂತ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಅನವಶ್ಯಕವಾಗಿ ತಿರುಗಾಡುವವರ ಚಲನವಲನ ಸೆರೆಹಿಡಿಯಲು ಪೊಲೀಸ್ ಇಲಾಖೆ ಡ್ರೋನ್ ಕ್ಯಾಮರಾ ಬಳಸಲು ಮುಂದಾಗಿದೆ.
ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬುಧವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಡ್ರೋನ್ ಕಾರ್ಯಾಚರಣೆ ವೀಕ್ಷಿಸಿ, ಕರೊನಾ ಮಾರ್ಗಸೂಚಿ ಉಲ್ಲಂಸುವವರಿಗೆ ಖಡಕ್ ಎಚ್ಚರಿಕೆ ರವಾನಿಸಿದರು.
ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸರ್ಕಾರದ ಆದೇಶದನ್ವಯ ಜನರು ಮನೆಯಿಂದ ಹೊರಗಡೆ ಅನವಶ್ಯಕವಾಗಿ ಓಡಾಡಬಾರದು. ಇದನ್ನು ಪ್ರಶ್ನಿಸುವ ಅಧಿಕಾರ ಪೊಲೀಸ್ ಇಲಾಖೆಗೆ ಇದ್ದು ಸರ್ಕಾರದ ಆದೇಶ ಉಲ್ಲಂಘಿಸುವವರನ್ನು ಕಾನೂನಿನಡಿ ಬಂಧಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿಯುವ ದೃಶ್ಯಗಳನ್ನು ಕಂಟ್ರೋಲ್ ರೂಂನಲ್ಲಿ ಕುಳಿತು ಪರಿಶೀಲಿಸಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ಡಿಎಆರ್, ಹೋಂಗಾರ್ಡ್ ಸಂಪೂರ್ಣ ಬಳಸಿಕೊಂಡಿದ್ದು, ಠಾಣೆಯಲ್ಲಿ ಒಬ್ಬೊಬ್ಬ ಸಿಬ್ಬಂದಿ ಮಾತ್ರ ಉಳಿದಿದ್ದು, ಉಳಿದ ಶೇ.90ರಷ್ಟು ಸಿಬ್ಬಂದಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ಯ್ೂ ಸಂಪೂರ್ಣ ಜಿಲ್ಲಾಡಳಿತದ ಹಿಡಿತದಲ್ಲಿದ್ದು, ಜನರು ಸಹಕಾರ ನೀಡುವ ಮೂಲಕ ಮಹಾಮಾರಿ ವಿರುದ್ಧ ಗೆಲುವು ಸಾಧಿಸಬೇಕಿದೆ.
ಸರ್ಕಾರದ ಆದೇಶ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ವಿವಿಧ ಐಪಿಸಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಕಾರಾಗೃಹವಾಸ ವಿಧಿಸುವ ಅವಕಾಶವಿದೆ. ಹಾಗಾಗಿ, ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಕರೊನಾ ಸೋಂಕು ನಿಯಂತ್ರಿಸಲು ರಾಜ್ಯ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಗೆ ಜಿಲ್ಲೆಯಲ್ಲಿ ಕಂದಾಯ ಇಲಾಖೆ ಜತೆಗೂಡಿ 28 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಬುಧವಾರ ಲಾಕ್‌ಡೌನ್‌ಗೆ ಜನರು ಸಹಕಾರ ನೀಡಿದ್ದಾರೆ. ತುಮಕೂರು ನಗರದಲ್ಲಿ 20 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ, ಕಾರ್ಖಾನೆಗಳಿಗೆ, ತುರ್ತು ಸಂದರ್ಭದಲ್ಲಿ ಓಡಾಟಕ್ಕೆ ಅವಕಾಶವಿರುವ ಕಾರಣಕ್ಕೆ ರಸ್ತೆಯಲ್ಲಿ ಓಡಾಟ ನಡೆದಿದೆ
ಡಾ.ಕೆ.ವಂಶಿಕೃಷ್ಣ, ಜಿಲ್ಲಾ ಪೊಲೀಸ್ ಅಧೀಕ್ಷಕ
28ಟಿಎಂಕೆ ಡ್ರೋಣ್ ಕರ್ಪ್ಯೂ: ತುಮಕೂರಿನ ಶಿವಕುಮಾರಸ್ವಾಮೀಜಿ ವೃತ್ತದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ವಾಹನ ಸಂಚಾರದ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಡ್ರೋಣ್ ಕಾರ್ಯಾಚರಣೆ ಬಗ್ಗೆ ತಿಳಿದುಕೊಂಡರು. ಎಸ್‌ಪಿ ಡಾ.ಕೆ.ವಂಶಿಕೃಷ್ಣ ಇದ್ದರು.