ಡ್ರೋಣ್ ಕಣ್ಗಾವಲಿದೆ ಹುಷಾರ್ !

H29 Dron Camera 1
Published on

ಹುಬ್ಬಳ್ಳಿ: ಕೊನೆಗೂ ಎಚ್ಚೆತ್ತುಕೊಂಡ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಅವಳಿ ನಗರದ ಕಂಟೈನ್​ವೆುಂಟ್ ಪ್ರದೇಶಗಳಲ್ಲಿ ಡ್ರೋಣ್ ಕ್ಯಾಮೆರಾ ಕಣ್ಗಾವಲು ಹಾಕಿದ್ದಾರೆ. ಆ ಮೂಲಕ ಲಾಕ್​ಡೌನ್ ಉಲ್ಲಂಘಿಸುವವರ ಪತ್ತೆಗೆ ಮುಂದಾಗಿದ್ದಾರೆ.

ಕಂಟೈನ್​ವೆುಂಟ್ ಪ್ರದೇಶದಲ್ಲಿ ಇರುವ ಸಾರ್ವಜನಿಕರು ಅನಗತ್ಯವಾಗಿ ಹೊರಗೆ ಬಂದೀರಾ ಹುಷಾರ್..!

ಇಲ್ಲಿನ ಕಮರಿಪೇಟ, ಮುಲ್ಲಾ ಓಣಿ, ಡಾಕಪ್ಪ ವೃತ್ತ, ಕರಾಡಿ ಓಣಿ, ಕೇಶ್ವಾಪುರದ ಆಜಾದ್ ಕಾಲನಿ, ಹುಬ್ಬಳ್ಳಿ ಮತ್ತು ಧಾರವಾಡದ ಎಪಿಎಂಸಿ ಸೇರಿದಂತೆ ವಿವಿಧೆಡೆ ಬುಧವಾರ ಡ್ರೋಣ್ ಕ್ಯಾಮೆರಾ ಹಾರಾಡಿದೆ. ಅಲ್ಲಿನ ಸಮಗ್ರ ಚಿತ್ರಣವನ್ನು ಸೆರೆ ಹಿಡಿದಿದೆ. ಲಾಕ್​ಡೌನ್ ನಿಯಮ ಉಲ್ಲಂಘಿಸುವವರ ಮೇಲೂ ಡ್ರೋಣ್ ಕಣ್ಣಿಡಲಿದೆ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net