

ಯಾದಗಿರಿ : ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿP್ಷÀಣ ಒದಗಿಸುವ ಜತೆಗೆ ಡ್ರಾಪ್‌ಔಟ್ ಆಗಿರುವ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರP್ಷÀಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಮಕ್ಕಳ ರP್ಷÀಣಾ ವ್ಯವಸ್ಥೆ ಕುರಿತ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಹೆಚ್ಚಾಗಬೇಕು. ಹಾಜರಾತಿ ನಿರ್ವಹಣೆ ಕಡ್ಡಾಯ. ಗುಣಾತ್ಮಕ ಶಿP್ಷÀಣ, ಬಿಸಿಯೂಟ ಯೋಜನೆಯಡಿ ಪೌಷ್ಟಿಕ ಆಹಾರ ಪೂರೈಕೆ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡುವಂತೆ ಹೇಳಿದರು.
ಸರ್ಕಾರಿ ವಸತಿ ಶಾಲೆಗಳಲ್ಲಿ ವಿಶೇಷವಾಗಿ ಕುಡಿಯುವ ನೀರು, ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ, ಪೌಷ್ಟಿಕ ಆಹಾರ, ಗುಣಮಟ್ಟದ ದವಸ ಧಾನ್ಯ, ಹಾಜರಾತಿ ಸಮರ್ಪಕ ನಿರ್ವಹಣೆ, ಮಕ್ಕಳ ಆರೋಗ್ಯ ನಿರ್ವಹಣೆಗೆ ವಿಶೇಷ ಕಾಳಜಿ, ಮೆನು ಚಾರ್ಟ್ ಅನ್ವಯ ಉಪಾಹಾರ ವಿತರಣೆ, ಪರಿಸರ ಸುಚಿತ್ವ, ದೂರು ಪೆಟ್ಟಿಗೆಗಳ ಸ್ಥಾಪನೆ, ಪಾಲಕರು ಮತ್ತು ಮಕ್ಕಳ ಸಮP್ಷÀಮ ಸಮಸ್ಯೆಗಳಿಗೆ ತP್ಷÀಣ ಪರಿಹಾರ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ತಾಕೀತು ಮಾಡಿದರು.
ಜಿಲ್ಲೆಯ ಬಾರ್, ರೆಸ್ಟೋರೆಂಟ್, ಧಾಬಾ, ವೈನ್‌ಶಾಪ್, ವಿವಿಧ ಉದ್ದಿಮೆಗಳಲ್ಲಿ ತೊಡಗಿರುವ ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಬೇಕು. ಅಂಥ ಸ್ಥಳದಲ್ಲಿ ಮಕ್ಕಳು ಕಂಡುಬAದಲ್ಲಿ ಸಂಬAಧಿತರ ಲೈಸೆನ್ಸ್ ರದ್ದುಪಡಿಸಬೇಕು. ಭಿಕ್ಷಾಟಣೆಯಲ್ಲಿ ತೊಡಗಿರುವ ಮಕ್ಕಳನ್ನು ಗುರುತಿಸಿ ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳ ಆರೋಗ್ಯ ಮತ್ತು ಅಪೌಷ್ಟಿಕ ನಿವಾರಣೆಗೆ ವಿಶೇಷ ಗಮನಹರಿಸಬೇಕು. ಸಖಿ ಒನ್ ಸ್ಟಾಪ್ ಕೇಂದ್ರ ದಿನದ ೨೪ ಗಂಟೆ ಕಾರ್ಯನಿರ್ವಹಿಸಿ ಮಹಿಳೆಯರು ಮತ್ತು ಮಕ್ಕಳ ರP್ಷÀಣೆಯತ್ತ ಚಿತ್ತ ಹರಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಗರೀಮಾ ಪನ್ವಾರ್ ಮಾತನಾಡಿ, ಶಹಾಪುರ ತಾಲೂಕಿನ ಹಳಿಸಗರ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿಯರಿಗೆ ನೋಟಿಸ್ ಜಾರಿಗೊಳಿಸಲಾಗುವುದು. ಬಾಲ್ಯ ವಿವಾಹವಾಗಿ ೧೮ ವರ್ಷದೊಳಗೆ ಗರ್ಭಿಣಿಯಾದ ಹೆಣ್ಣು ಮಕ್ಕಳು ಆಸ್ಪತ್ರೆಯಲ್ಲಿ ದಾಖಲಾದ ಬಗ್ಗೆ ದಾಖಲೆಗಳ ಆಧಾರದ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ರವೀಂದ್ರ ಹೊನೋಲೆ ಮಾತನಾಡಿ, ಖಾಸಗಿ ಶಾಲಾ ಬಸ್ ಹಾಗೂ ಅಧಿಕೃತ ವಾಹನಗಳಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ವ್ಯವಸ್ಥೆ ಆಗಬೇಕು. ಮಕ್ಕಳ ಜತೆ ಅಸಭ್ಯವಾಗಿ ವರ್ತಿಸುವ ವಾಹನ ಚಾಲಕರ ಹಾಗೂ ಮಿತಿಮೀರಿ ವಿದ್ಯಾರ್ಥಿಗಳನ್ನು ತುಂಬುವ ಶಾಲಾ ವಾಹನ ಮತ್ತು ಆಟೋದಲ್ಲಿ ಕರೆದುಕೊಂಡು ಹೋಗುವವರ ಬಗ್ಗೆ ತೀವ್ರ ನಿಗಾ ವಹಿಸಿ ಎಂದರು.
ಡಿವೈಎಸ್‌ಪಿ ಬಸವೇಶ್ವರ ಹೀರಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರೇಮಮೂರ್ತಿ ಇದ್ದರು.