ಡ್ರಾಪ್ ಪಡೆದವನಿಂದಲೇ ಕಳ್ಳತನ?

Crime Logo
Published on

ಕಲಬುರಗಿ: ಮೊಟಾರ್ ಸೈಕಲ್ ನಿಲ್ಲಿಸಿ ವ್ಯಕ್ತಿಯೊಬ್ಬನಿಗೆ ಡ್ರಾಪ್ ನೀಡಿದ್ದ ಚಾಲಕನ ಪಾಕೆಟ್‌ನಲ್ಲಿದ್ದ ೩೨ ಸಾವಿರ ರೂ. ಕಳ್ಳತನ ಮಾಡಿದ ಘಟನೆ ಕುಸನೂರ ರೋಡ್ ಬಳಿ ನಡೆದಿದೆ. ಸಮುದಾಯ ಆರೋಗ್ಯ ಅಧಿಕಾರಿ ಚಂದ್ರಶೇಖರ ಭಾಗಿ ಹಣ ಕಳೆದುಕೊಂಡವರು. ಚಂದ್ರಶೇಖರ ಅವರು ಹಳೇ ಆರ್‌ಟಿಒ ಕ್ರಾಸ್‌ನಿಂದ ಶಹಾಬಾದ್ ಕ್ರಾಸ್‌ಗೆ ಹೋಗುವಾಗ ಅಂಬೇಡ್ಕರ್ ಹಾಸ್ಟೆಲ್ ಬಳಿ ವ್ಯಕ್ತಿ ಡ್ರಾಪ್ ಕೇಳಿದ್ದಾನೆ. ಬೈಕ್ ನಿಲ್ಲಿಸಿ ಹಿಂದೆ ಕೂಡಿಸಿಕೊಂಡು ಶಹಾಬಾದ್ ಕ್ರಾಸ್ ಬಳಿ ಇಳಿಸಲಾಗಿದೆ. ಸ್ವಲ್ಪ ಸಮಯದ ನಂತರ ಬ್ಯಾಗ್ ನೋಡಿದಾಗ ಅದರಲ್ಲಿ ಇಟ್ಟಿದ್ದ ೩೨ ಸಾವಿರ ರೂ. ಇರಲಿಲ್ಲ. ಡ್ರಾಪ್ ಪಡೆದ ವ್ಯಕ್ತಿಯೇ ಹಣ ಕಳ್ಳತನ ಮಾಡಿದ ಸಂಶಯವಿದೆ ಎಂದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net