ಡ್ರಾಪ್ ಕೊಡುವ ನೆಪದಲ್ಲಿ ಚಿನ್ನಾಭರಣಗಳ ಸಮೇತ ನಗದು ಕಿತ್ತುಕೊಂಡು ಪರಾರಿ

Thief
Published on

ಹಾಸನ: ಯುವಕನಿಗೆ ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಚಿನ್ನಭರಣ ನಗದು ಮತ್ತು ಮೊಬೈಲ್ ಸಮೇತ ದೋಚಿ ಪರಾಧಿಯಾಗಿರುವ ಘಟನೆ ಭಾನುವಾರ ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ನಡೆದಿದೆ.

ಸಕಲೇಶಪುರ ತಾಲೂಕು ಯಸಳೂರು ಹೋಬಳಿ ದೊಡ್ಡ ಕಲ್ಲೂರು ಗ್ರಾಮದ ಸಂದೀಪ್ ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಚಿಕ್ಕಮಂಗಳೂರು ಪ್ರವಾಸ ಮುಗಿಸಿಕೊಂಡು ಬೇಲೂರಿಗೆ ಆಗಮಿಸಿದ್ದಾರೆ ಈ ಸಂದರ್ಭದಲ್ಲಿ ಸ್ನೇಹಿತರು ಸಕಲೇಶಪುರಕ್ಕೆ ತೆರಳಿದ್ದಾರೆ ಆದರೆ ಪ್ರದೀಪ್ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಲೆಂದು ಬೇಲೂರಿನ ನೆಹರು ನಗರದಲ್ಲಿ ಇಳಿದು ಬಸ್ಸಿಗಾಗಿ ಕಾಯುತ್ತಿದ್ದಾಗ ಚಿಕ್ಕಮಂಗಳೂರು ಕಡೆಯಿಂದ ಬಂದ ಸಿಲ್ವರ್ ಬಣ್ಣದ ಕಾರಿನ ಚಾಲಕ ಹಾಸನಕ್ಕೆ ಡ್ರಾಪ್ ಕೊಡುದಾಗಿ ಹತ್ತಿಸಿಕೊಂಡು ಸ್ವಲ್ಪ ದೂರ ಹೋದ ನಂತರ ಹಗರೆಯಿಂದ ಹಳೇಬೀಡು ಕಡೆಗೆ ಆ ಒಂದು ಹಳ್ಳಿಯ ಅಡಿಕೆ ತೋಟದಲ್ಲಿ ಹಗ್ಗದಿಂದ ಕಟ್ಟಿಹಾಕಿದ್ದಾರೆ.

ನಂತರ 3000 ನಗದು 3 ಗ್ರಾಂ ತೂಕದ ಉಂಗುರ ಹಾಗೂ ಅಕೌಂಟಿನಲ್ಲಿದ್ದಂತಹ 9200 ಹಣವನ್ನು ವರ್ಗಾವಣೆ ಮಾಡಿಕೊಂಡು ಎರಡು ಮೊಬೈಲ್ ಗಳನ್ನು ಕಿತ್ತುಕೊಂಡು ನಂತರ ಒಂದು ಮೊಬೈಲ್ ಕೊಟ್ಟು ಕಾರಿನಿಂದ ಇಳಿಸಿ ಪರಾರಿಯಾಗಿದ್ದಾರೆ ಎಂದು ಬೇಲೂರು ಠಾಣೆಗೆ ದೂರು ನೀಡಿದ್ದು, ಈ ಸಂಬಂದ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net