

ಕಾಸರಗೋಡು: ಮಾದಕ ವಸ್ತು ಪಿಡುಗಿನ ವಿರುದ್ಧ ರಾಷ್ಟ್ರೀಯ ಶಿಕ್ಷಕರ ಪರಿಷತ್(ಎನ್‌ಟಿಯು) ನೇತೃತ್ವದಲ್ಲಿ ಮೇಣದ ಬತ್ತಿ ಉರಿಸಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾಸರಗೋಡು ಡಿವೈಎಸ್ಪಿ ಸಿ.ಕೆ.ಸುನೀಲ್ ಕುಮಾರ್ ಉದ್ಘಾಟಿಸಿ, ಮಾದಕ ದ್ರವ್ಯ ಮಾಫಿಯಾಗಳ ವಿರುದ್ಧ ಸಮಾಜ ಧ್ವನಿಯೆತ್ತಬೇಕಾಗಿದೆ. ಮಾದಕ ದ್ರವ್ಯಗಳ ದಾಸರಾಗುವುದನ್ನು ತಡೆಯುವ ಮೂಲಕ ಭಾವಿ ಜನಾಂಗವನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಡ್ರಗ್ಸ್ ಮಾಫಿಯಾ ವಿರುದ್ಧ ಸಮಾಜ ಸ್ಪಂದಿಸಲು ತಡ ಮಾಡಿದರೆ ದೇಶ ಭಾರಿ ಆಪತ್ತಿಗೆ ಸಿಲುಕಬೇಕಾದೀತು ಎಂದರು.
ಸಂಘಟನೆ ಜಿಲ್ಲಾಧ್ಯಕ್ಷ ಕೆ.ಪ್ರಭಾಕರನ್ ನಾಯರ್, ಒ.ಸತೀಶ್ ಕುಮಾರ್ ಶೆಟ್ಟಿ, ಅರವಿಂದಾಕ್ಷ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು. ಎ.ಸುಚಿತಾ ಸ್ವಾಗತಿಸಿದರು. ಕೆ.ಅಜಿತ್ ವಂದಿಸಿದರು.