ಡ್ರಗ್ಸ್ ನಿಯಂತ್ರಣಕ್ಕೆ ಕಠಿಣ ಕ್ರಮ ಜರುಗಿಸಿ

22kdl1
Published on

ಕುಂದಗೋಳ: ಡ್ರಗ್ಸ್ ಜಾಲ ರಾಜ್ಯದ ಉದ್ದಗಲಕ್ಕೂ ವಿಸ್ತಾರವಾಗಿದ್ದು, ಎಲ್ಲ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್​ಗಳಿಗೂ ಆವರಿಸಿದೆ. ಇದರ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಬೇಕು. ಅಲ್ಲದೆ, ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕಿನ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ತಹಸೀಲ್ದಾರ್ ವಿ. ಎಂ. ಮುಳುಗುಂದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು

ಹರೀಶ ಕೊನೇರಿ, ಮಹೇಶ ಶ್ಯಾಬಳ, ಗಿರೀಶ ಗದಗಿನ, ಮಂಜುನಾಥ ಭೋವಿ, ವಿನೋದ ನಾಡಗೌಡ, ಶಿವು ಗಂಗಾಯಿ, ಪ್ರಕಾಶ ನಾವಳ್ಳಿ, ಬಸವರಾಜ ಕಾಟಾಣಿ, ಗಣೇಶ ಮಾದಪ್ಪನವರ, ಸದಾಶಿವ ಕುಂಬಾಪೂರ ಹಾಗೂ ವಿದ್ಯಾರ್ಥಿಗಳು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net