ಡ್ಯಾಮ್ಗೆ ಹರಿದು ಬಂದ 5138.89 ಕ್ಯೂಸೆಕ್ ನೀರು

2407 KML-02
Published on

ಕಮಲಾಪುರ: ಮಹಾಗಾಂವ್ ಬಳಿಯಿರುವ ಗಂಡೋರಿ ಜಲಾಶಯಕ್ಕೆ ಶುಕ್ರವಾರ ಒಂದೇ ದಿನ 5,138.89 ಕ್ಯೂಸೆಕ್ ನೀರು ಹರಿದು ಬಂದಿದ್ದು, ಜಲಾಶಯದ ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಶುಕ್ರವಾರ ಬೆಳಗ್ಗೆ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ಜಲಾಶಯಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದ ಅವರು, ಗುರುವಾರ ರಾತ್ರಿ ಹಾಗೂ ಶುಕ್ರವಾರ ಸುರಿದ ಮಳೆಯಿಂದಾಗಿ ಜಲಾಶಯಕ್ಕೆ ಹೆಚ್ಚಿನ ನೀರು ಬಂದಿದೆ. 1.887 ಟಿಎಂಸಿ ಸಂಗ್ರಹ ಸಾಮಥ್ರ್ಯ ಹೊಂದಿದ್ದು, ಸದ್ಯ 1.615 ಟಿಎಂಸಿ ನೀರು ಲಭ್ಯವಿದೆ. ಇದೇ ರೀತಿ ಉಳ ಹರಿವು ಹೆಚ್ಚಾದಲ್ಲಿ ಕೆಲವೇ ದಿನಗಳಲ್ಲಿ ಡ್ಯಾಮ್ ಭರ್ತಿ ಯಾಗಲಿದೆ ಎಂದರು. ಜಲಾಶಯದ ಎಇಇ ಫಾರುಕ್ ಶಾದಾಬ್, ಕಂದಾಯ ನಿರೀಕ್ಷಕ ವೆಂಕಟೇಶ ಅಧೋನಿ, ಪ್ರಮುಖರಾದ ಬಸವರಾಜ ಕಟ್ಟೋಳಿ, ರಾಹುಲ ದೇವ್, ಮೊಹ್ಮದ್ ಇಲಿಯಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net