

ಶಿವಮೊಗ್ಗ: ನಗರದ ಗುರುಪುರದಲ್ಲಿ ಡ್ಯಾಗರ್ ಹಿಡಿದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕನ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುಪುರದ ದರ್ಶನ್(20) ಎಂಬಾತನ ವಿರುದ್ಧ ದೂರು ದಾಖಲಾಗಿದೆ. ಡ್ಯಾಗರ್ ಹಿಡಿದು ರೀಲ್ಸ್ ಮಾಡಿ ಅದಕ್ಕೆ ಯಾರ ಭಯವೂ ಇಲ್ಲ, ಪ್ರಳಯವಾಗೊಲ್ಲ, ಸಾವಿಗೆ ಅಂಜಲ್ಲ ಎಂಬ ಆಡಿಯೋ ಸಂಯೋಜಿಸಲಾಗಿತ್ತು. ಈ ರೀಲ್ಸ್ನಲ್ಲಿ ಎರಡು ಫೋಟೊ ಕೊಲಾಜ್ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆಗೆ ಭಂಗ ತರುವ ವಿಡಿಯೋ ಅಪ್‌ಲೋಡ್ ಮಾಡಿದ್ದಕ್ಕೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.