ಡೊಳ್ಳಿನ ಹಾಡುಗಳ ಸರದಾರ ಸುರೇಶ ರಾಮಚಂದ್ರ ಜೋಶಿ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನ

IMG-20210104-WA0058
Published on

ವಿಜಯಪುರ: ಕರ್ನಾಟಕ ಜಾನಪದ ಅಕಾಡೆಮಿಯಿಂದ ಕೊಡಮಾಡಲ್ಪಡುವ 2020 ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿಗೆ ಜಿಲ್ಲೆಯ ಕಲಾವಿದ ಸುರೇಶ ರಾಮಚಂದ್ರ ಜೋಶಿ ಭಾಜನರಾಗಿದ್ದಾರೆ.

ಬಬಲೇಶ್ವರ ತಾಲೂಕಿನ ನಿಡೋಣಿ ನಿವಾಸಿ ಸುರೇಶ ರಾಮಚಂದ್ರ ಜೋಶಿ ಡೊಳ್ಳಿನ ಖ್ಯಾತ ಕಲಾವಿದರು. ಡೊಳ್ಳಿನ ಹಾಡುಗಳ ಸರದಾರ ಎಂದೇ ಖ್ಯಾತರಾಗಿದ್ದ ಜೋಶಿ 40 ವರ್ಷಗಳ ಕಾಲ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಜೋಶಿ ಅವರಿಗೆ ಪ್ರಶಸ್ತಿ ಸಿಕ್ಕಿದ್ದು ಜಿಲ್ಲೆಯ ಪಾಲಿಗೆ ಸಿಕ್ಕ ಬಹುದೊಡ್ಡ ಕೊಡುಗೆ ಎಂದು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಾಳನಗೌಡ ಎಸ್. ಪಾಟೀಲ ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net