

ಕುಶಾಲನಗರ: ಬಸವ ಜಯಂತಿ ಅಂಗವಾಗಿ ಕುಶಾಲನಗರದ ಜಂಪ್ ಸ್ಮಾಶ್ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಡೈಮಂಡ್ ಡ್ಯಾಶರ್ಸ್ ತಂಡ ಮೊದಲ ಬಹುಮಾನ ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ತಂಡದ ಶ್ರೇಯಾಂಕಿತ ಆಟಗಾರ ರಕ್ಷಿತ್ ಹಾಗೂ ಲೋಹಿತ್ ಟ್ರೋಫಿ ಹಾಗೂ ನಗದು ಬಹುಮಾನವನ್ನು ಪಡೆದರು. ನೈಟ್ ರೈಡರ್ಸ್ ತಂಡ ಎರಡನೇ ಸ್ಥಾನ ಹಾಗೂ ಟೀಂ ರಾಕರ್ಸ್ ತಂಡ ಮೂರನೇ ಬಹುಮಾನ ಮತ್ತು ಆಕರ್ಷಕ ಟ್ರೋಫಿ ಪಡೆದುಕೊಂಡಿತು.
ಸೆಮಿಫೈನಲ್ ಹಾಗೂ ಅಂತಿಮ ಹಣಾಹಣಿಯಲ್ಲಿ ಆಡಿದ ಎಲ್ಲ ಆಟಗಾರರಿಗೆ ಪ್ರತ್ಯೇಕವಾಗಿ ಟ್ರೋಫಿ ನೀಡಲಾಯಿತು. ನೈಟ್ ರೈಡರ್ಸ್ ತಂಡದ ಮಾಲೀಕ ಮಹೇಶ್, ಟೀಂ ರಾಕರ್ಸ್ ತಂಡದ ಮಾಲೀಕ ಡಿ.ಎಂ.ಆನಂದ್, ಪುನೀತ್, ಪಿಡಿಒ ಲೋಕೇಶ್, ಸೈಜನ್ ಪೀಟರ್, ಅರುಣ್, ಸೋಮು, ಪಾಣತ್ತಲೆ ಗಿರೀಶ್, ರಾಜೇಶ್, ಅಭಿ, ಸುಜಿತ್, ಜಂಪ್ ಸ್ಮಾಶ್ ಕ್ರೀಡಾಂಗಣದ ಮಾಲೀಕ ಶರತ್ ಇದ್ದರು.