

ಮಳವಳ್ಳಿ: ತಾಲೂಕಿನ ಡೇರಿಗಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಉತ್ಪಾದಕರು ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಹಕಾರ ನೀಡಬೇಕೆಂದು ಕೆಎಂಎಫ್ ನಿರ್ದೇಶಕ ವಿ.ಎಂ.ವಿಶ್ವನಾಥ್ ಮನವಿ ಮಾಡಿದರು.
ತಾಲೂಕಿನ ಹಂಗ್ರಾಪರ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡ ನಿರ್ಮಾಣದ ಭೂಮಿಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಕೆಎಂಎಫ್‌ನಿಂದ ಡೇರಿ ಕಟ್ಟಡ ನಿರ್ಮಾಣಕ್ಕೆ 4.5 ಹಾಗೂ ಮನ್‌ಮುಲ್ ವತಿಯಿಂದ 2 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದರು.
ತಾಲೂಕಿನಲ್ಲಿರುವ 149 ಡೇರಿಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದು, ಉತ್ಪಾದಕರೂ ಅದೇ ರೀತಿ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸೌಲಭ್ಯಗಳನ್ನು ತರಲುಬಲ ನೀಡಬೇಕೆಂದು ಮನವಿ ಮಾಡಿದರು.
ಶಾಸಕ ಡಾ.ಕೆ.ಅನ್ನದಾನಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಸಂಘದ ಅಧ್ಯಕ್ಷೆ ಚಂದ್ರಕಲಾ, ಉಪಾಧ್ಯಕ್ಷೆ ನಾಗಮ್ಮ, ಕಾರ್ಯದರ್ಶಿ ಸುನಿತಾ, ಮನ್‌ಮುಲ್ ವಿಸ್ತರಣಾಧಿಕಾರಿ ಮಧುಶಂಕರ್, ಗ್ರಾಪಂ ಸದಸ್ಯರಾದ ಪ್ರಭು, ರೂಪಾರಾಣಿ, ಮಂಗಳಮ್ಮ, ಛೇ.ಮಹದೇವಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ಸೊಸೈಟಿ ನಿರ್ದೇಶಕ ಚಂದ್ರು, ಮುಖಂಡರಾದ ಕಾರಯ್ಯ, ಪ್ರಕಾಶ, ಮಹಲಿಂಗಸ್ವಾಮಿ, ಶಾಂತಪ್ಪ, ನಂಜುಂಡಸ್ವಾಮಿ ಇತರರಿದ್ದರು.