ಡೇರಿ ಕಾರ್ಯದರ್ಶಿ ವಿರುದ್ಧ ಪ್ರತಿಭಟನೆ

17
Published on

ಶಾಸಕ ಬಿ.ಸುರೇಶ್​ಗೌಡ ನೇತೃತ್ವದಲ್ಲಿ ಪ್ರತಿಭಟನೆ

ತುಮಕೂರು: ತಾಲೂಕಿನ ಕರ್ಣಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಮಾನತುಗೊಂಡ ಕಾರ್ಯದರ್ಶಿಗೆ ಸಹಕಾರ ಸಂಘಗಳ ಇಲಾಖೆ ಅಧಿಕಾರಿಗಳು ರಕ್ಷಣೆ ನೀಡುತ್ತಿರುವುದು ಗ್ರಾಮದಲ್ಲಿ ಸಾಮರಸ್ಯ ಕದಡಿದೆ ಎಂದು ಆರೋಪಿಸಿ ಕರ್ಣಕುಪ್ಪೆ ಗ್ರಾಮಸ್ಥರು ಶಾಸಕ ಬಿ.ಸುರೇಶ್​ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಂರ್ಕಿಣದಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯಲ್ಲಿ ಶಾಸಕ ಬಿ.ಸುರೇಶ್​ಗೌಡ ಮಾತನಾಡಿ, ಕರ್ಣಕುಪ್ಪೆ ಡೇರಿ ಕಾರ್ಯದರ್ಶಿ ವಿರುದ್ಧ ಸಂಘದ ಕಾರ್ಯಕಾರಿ ಸಮಿತಿ ರ್ನಿಣಯ ಮಾಡಿ ವರದಿ ನೀಡಿದ್ದರೂ ಅಧಿಕಾರಿಗಳು ಕಾರ್ಯದರ್ಶಿ ರಕ್ಷಣೆಗೆ ನಿಂತಿದ್ದಾರೆ ಎಂದು ದೂರಿದ ಅವರು, ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು ಗೊಂದಲ ನಿವಾರಿಸಿ ನ್ಯಾಯ ಒದಗಿಸಬೇಕು ಎಂದು ಸಹಾಯಕ ನಿಬಂಧಕ ಎಚ್​.ಓಬಳೇಶ್​ ಅವರನ್ನು ಒತ್ತಾಯಿಸಿದರು.

ಪ್ರಕರಣ ಸಂಬಂಧ 64ನೇ ಕಲಂ ಅಡಿ ತನಿಖೆ ನಡೆಸಬೇಕಾಗಿದ್ದರೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು 65ನೇ ಕಲಂ ಅಡಿ ತನಿಖೆ ನಡೆಸಲು ಆದೇಶ ಮಾಡಿದ್ದು, ದುರುದ್ದೇಶಪೂರಕವಾಗಿದೆ. ಇದರಿಂದ ಭ್ರಷ್ಟ ಕಾರ್ಯದರ್ಶಿ ರಕ್ಷಣೆ ಮಾಡುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆಮಾನತಾಗಿರುವ ಕಾರ್ಯದರ್ಶಿ ಕೊಟ್ಟ ದಾಖಲೆ ಪತ್ರಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಡೇರಿ ಸದಸ್ಯರು ನೀಡಿದ ದಾಖಲೆಗಳನ್ನು ತನಿಖೆಗೆ ಪರಿಗಣಿಸದೇ ಇರುವುದು ದುರುದ್ದೇಶಿತವಾಗಿದೆ. ಅಲ್ಲದೆ, ಸಂಘದ ನಿರ್ದೇಶಕರ ವಿರುದ್ಧವೇ ಸ್ವಯಂಪ್ರೇರಿತವಾಗಿ ದಾಖಲೆ ಸೃಷ್ಟಿಸಿದ್ದಾರೆ ಎಂದರು. ಕರ್ಣಕುಪ್ಪೆ ಡೇರಿ ಅಧ್ಯಕ್ಷ ಕೈವಲ್ಯಪತಿ, ಮುಖಂಡರಾದ ನವೀನ್​, ಶಾಂತಕುಮಾರ್​, ರಂಗಸ್ವಾಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net