ಬಳ್ಳಾರಿ ; ಡೇಟಾ ಸೈನ್ಸ್ ಕಲಿಯುವುದು ಎಲ್ಲ ವೃತ್ತಿಗಳಲ್ಲಿ ಅಗತ್ಯವಾಗಿದೆ ಎಂದು ವಿಎಸ್‌ಕೆವಿವಿಯ ಕುಲಪತಿ ಪ್ರೊ. ಎಂ. ಮುನಿರಾಜು ಹೇಳಿದರು.
ಇಲ್ಲಿನ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಟೇಬ್ಲೋ ಮತ್ತು ಪವರ್ ಬಿಐ ಬಳಸಿ ಡೇಟಾ ವೀಜುಲೈಸೇಶನ್ ಕುರಿತು ಎರಡು ದಿನಗಳ ತಾಂತ್ರಿಕ ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಡೇಟಾ ಸೈನ್ಸ್ ವಿದ್ಯಾರ್ಥಿಗಳಿಗೆ, ಪವರ್ ಬಿಐ, ಟೇಬ್ಲೋ ಮುಂತಾದ ಹೊಸ ಕೌಶಲ್ಯಗಳನ್ನು, ವಿಶ್ಲೇಷಣಾ ಕೌಶಲ್ಯಗಳೊಂದಿಗೆ, ಆಧುನಿಕ ಕಂಪ್ಯೂಟಿಂಗ್ ಯುಗದಲ್ಲಿ ಕೌಶಲ್ಯ ಮಟ್ಟಗಳನ್ನು ಹೆಚ್ಚಿಸಲು ಅಗತ್ಯವಿದೆ ಎಂದು ತಿಳಿಸಿದರು.
ಪ್ರಮುಖರಾದ ಖಜಾಂಚಿ ಎರ‌್ರಿಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಹನುಮಂತರೆಡ್ಡಿ, ಡೇಟಾ ಸೈನ್ಸ್ ವಿಾಗದ ಮುಖ್ಯಸ್ಥ ಡಾ.ಕೆ.ರಾಘವೇಂದ್ರ ಪ್ರಸಾದ್ ಸೇರಿದಂತೆ ಇತರರಿದ್ದರು.