ಡೇಟಾ ಅನಲೈಸಿಂಗ್ ತಿಳಿವಳಿಕೆ ಅಗತ್ಯ

ctd 15 news sjm 0002
Published on

ಚಿತ್ರದುರ್ಗ: ವಿವಿಧ ಕ್ಷೇತ್ರಗಳಲ್ಲಿರುವ ಸಮಸ್ಯೆಗಳನ್ನು ಸರಳವಾಗಿ ಬಗೆಹರಿಸಲು ಆಧುನಿಕ ತಂತ್ರಜ್ಞಾನ ಸಹಾಯಕಾರಿಯಾಗಿದೆ ಎಂದು ಪ್ರಾಚಾರ‌್ಯ ಡಾ.ಪಿ.ಬಿ.ಭರತ್ ಹೇಳಿದರು.
ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ ವಿಭಾಗದಿಂದ ಕಾಲೇಜಿನಲ್ಲಿ ಏರ್ಪಡಿಸಿರುವ ‘ಡೇಟಾ ಅನಲಿಟಿಕ್ಸ್ ಯೂಸಿಂಗ್ ಪೈಥಾನ್’ ಕುರಿತ ಎರಡು ದಿನಗಳ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಡೇಟಾ ಅನಲೈಸಿಂಗ್ ಕುರಿತಂತೆ ವಿದ್ಯಾರ್ಥಿಗಳಲ್ಲಿ ಪ್ರಾಥಮಿಕ ತಿಳಿವಳಿಕೆ ಅಗತ್ಯವಿದೆ ಎಂದರು.
ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಡಾ.ಕೆ.ಬಿ.ಡಾ.ಸಿದ್ದೇಶ್ ಮಾತನಾಡಿ, ಈಚಿನ ದಿನಮಾನಗಳಲ್ಲಿ ಡೇಟಾ ಅನಲೈಸಿಂಗ್ ಹೆಚ್ಚಿನ ಪ್ರಾಮುಖ್ಯ ಪಡೆದುಕೊಂಡಿದೆ. ವಿದ್ಯಾರ್ಥಿಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಭೆಯಾಂತ್ರಿಕ್ಸ್ ಸಾಫ್ಟ್‌ಲ್ಯಾಬ್ ತಾಂತ್ರಿಕ ತಂಡದ ವ್ಯವಸ್ಥಾಪಕ ವಿ.ಎಸ್.ಮಲ್ಲೇಶ್, ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ ಮಹಾಂತೇಶ್ ಬಿ.ಶಿರೂರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಕಾರ‌್ಯಕ್ರಮ ಸಂಚಾಲಕರಾದ ಪ್ರೊ.ಎಂ.ಕೆ.ಸುದರ್ಶನ್, ಪ್ರೊ.ಟಿ.ತನುಜಾ, ಪ್ರೊ.ಟಿ.ಬಿ.ಲವಕುಮಾರ್, ಪ್ರೊ.ವಿ.ಆರ್.ಸಂದೀಪ್, ಪ್ರೊ.ಎಸ್.ರಘು, ಪ್ರೊ.ಚೇತನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net