ಡೆತ್‌ನೋಟ್ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ

D.sudhakar dist minister--00003
Published on

ಚಿತ್ರದುರ್ಗ:ಬೆಳೆ ವಿಮೆ ಸಮರ್ಪಕ ವಿತರಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು,ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬೆಳೆ ವಿಮೆ ಸಮರ್ಪಕವಾಗಿ ಬಿಡು ಗಡೆಯಾಗಿಲ್ಲ ಎಂಬ ರೈತರ ಅಹವಾಲು ತಮ್ಮ ಗಮನದಲ್ಲಿದ್ದು,ಕೂಡಲೇ ಈ ಕುರಿತಂತೆ ಉಂಟಾಗಿರುವ ಲೋಪಗಳನ್ನು ಸರಿಪಡಿಸುವುದಾಗಿ ತಿಳಿಸಿದರು.
ಮಹರ್ಷಿ ವಾಲ್ಮಿಕಿ ಅಭಿವೃದ್ಧಿ ನಿಗಮದ ಅಧೀಕ್ಷಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಕ್ಕೆ,ವಿಜಯೇಂದ್ರ ಪ್ರತಿ ದಿನ ಅವರಿವರನ್ನು ವಜಾ ಮಾಡಿ ಎನ್ನುತ್ತಾರೆ. ಮೊ ದಲು ಅವರು ತಮ್ಮ ಪಾರ್ಟಿಯನ್ನು ಸರಿಯಾಗಿ ಇಟ್ಟುಕೊಳ್ಳಲಿ. ಅಧಿಕಾರಿ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದರೆ ಗೊತ್ತಿಲ್ಲ, ಅದಕ್ಕೆ ಮಂತ್ರಿ ರಾಜೀನಾಮೆ ಕೇಳಿದರೆ ಹೇಗೆ?ಡೆತ್‌ನೋಟ್ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲವೆಂದರು.
ಹೇರ್‌ಕಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಮಧುಬಂಗಾರಪ್ಪ ಹಾಗೂ ವಿಜಯೇಂದ್ರ ನಡುವೆ ನಡೆದಿರುವ ಜಟಾಪಟಿ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು,ದೇಶದಲ್ಲಿ ಸ್ವತಂತ್ರವಾಗಿ ಬದುಕಲು ಅವಕಾಶವಿದೆ.ಅಬ್ದುಲ್ ಕಲಾಂ ಹೇಗಿದ್ರು? ಅವರು ರಾಷ್ಟ್ರಪತಿಯಾಗಿದ್ದರು ಎಂದು ಮಧು ಬಂಗಾರಪ್ಪ ಅವರ ಹೇರ್‌ಸ್ಟೈಲ್‌ನ್ನು ಸುಧಾಕರ್ ಸಮರ್ಥಿಸಿದರು.
ಭಾರತವನ್ನು ಹಿಂದು ರಾಷ್ಟ್ರ ಮಾಡೋದು ಬಿಜೆಪಿಯ ಹಿಡನ್‌ಅಜಂಡಾ,ನಾವು ಅದನ್ನು ವಿರೋಧಿಸುತ್ತೇವೆ. ಭಾರತವನ್ನು ಹಿಂದುಸ್ಥಾನ ಎಂದು ಮೊದಲಿನಿಂದಲೂ ಕರೆಯಲಾಗುತ್ತದೆ.ಬಿಜೆಪಿ ಅಭಿವೃದ್ಧಿ ಬಿಟ್ಟು ಭಾವನಾತ್ಮಕವಾಗಿ ಮಾತನಾಡುತ್ತಿದೆ, ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಲಿ,ಹಿಂದುತ್ವ, ರಾಮಮಂದಿರ ಅಂದರೆ ಬಡವರ ಹೊಟ್ಟೆ ತುಂಬಬೇಕಲ್ವಾ? ಎಂದು ಪ್ರಶ್ನಿಸಿದರು. ಮೇ 31ಕ್ಕೆ ಪ್ರಜ್ವಲ್ ರೇವಣ್ಣ ದೇಶಕ್ಕೆ ಹಿಂತಿರುಗುವ ಕುರಿತಂತೆ ರಿಯಾಕ್ಟ್ ಮಾಡುವುದಿಲ್ಲವೆಂದರು. ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಹೋಲ್ಸೇಲ್ ಆಗಿ ಬದಲಾವಣೆ ಆಗುತ್ತದೆ ಎಂಬ ಮಾಜಿ ಸಚಿವ ಸಿ.ಟಿ.ಅವರ ಹೇಳಿಕೆ ಅದೆಲ್ಲ ಸಾಧ್ಯವಾಗದೆಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net