

ಚಿತ್ರದುರ್ಗ: ತಾಲೂಕು ಬೆಳಘಟ್ಟ ಗ್ರಾಮದಲ್ಲಿ ಮಂಗಳವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಡೆಂೆ ರೋಗದ ವಿರುದ್ಧ ಜಾಗೃತಿ ಜಾಥಾವನ್ನು ಆಡಳಿತ ವೈದ್ಯಾಧಿಕಾರಿ ಡಾ. ನಳಿನಾಕ್ಷಿ ಉದ್ಘಾಟಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಡಿ. ಮಹೇಶ್,ನಾಗೇಶ್, ಔಷಧ ಅಧಿಕಾರಿ ಕೆ.ಆರ್. ಶಶಿಧರ್, ಆರೋಗ್ಯ ಸುರಕ್ಷತಾಧಿಕಾರಿಗಳಾದ ನಿರ್ಮಲಮ್ಮ, ರೋಷನ್, ಉಷಾ, ಶೋಭಾ, ನವೀನಲಕ್ಷ್ಮೀ, ಭಾರತಿ, ಮಂಜುಶ್ರೀ, ಯೋಗ ತರಬೇತುದಾರ ರವಿ ಕೆ. ಅಂಬೇಕರ್, ಮಹಾದೇವಿ ಇತರರಿದ್ದರು.