

ಚಿತ್ರದುರ್ಗ: ಡೆಂೆ ರೋಗಕ್ಕೆ ಆಯುರ್ವೇದಲ್ಲಿ ಪರಿಹಾರವಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮು ದ್ರ ಹೇಳಿದ್ದಾರೆ. ಮಳೆಗಾಲ ಪ್ರಾರಂಭ ಆಗಿರುವುದರಿಂದ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆದುಕೊಳ್ಳಬೇಕು. ಸೊಳ್ಳೆಗಳು ಮನೆ ಒಳಗೆ ಬರದಂತೆ ತಡೆಯಲು ಮನೆ ಸುತ್ತ ಚಂಡು ಹೂವು, ಬೇವಿನ ಎಲೆ ಹಾಗೂ ಬೆಳ್ಳುಳ್ಳಿ ಸಿಪ್ಪೆ ಹೊಗೆ ಹಾಕಬೇಕು. ತೀವ್ರ ಜ್ವರ, ತಲೆನೋವು, ಕೈಕಾಲು ನೋವು ಲಕ್ಷಣಗಳು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರ ಚಿಕಿತ್ಸೆಯೊಂದಿಗೆ ಪಪ್ಪಾಯಿ ಎಲೆ, ಈರುಳ್ಳಿ ರಸವನ್ನು ಮನೆಮದ್ದಾಗಿ ಬಳಸಬಹುದು. ಅಮೃತಬಳ್ಳಿ, ತುಳಸಿ ಎಲೆಗಳನ್ನು ಸೇವಿಸಬಹುದು ಎಂದು ತಿಳಿಸಿದ್ದಾರೆ.