

ಚಿತ್ರದುರ್ಗ: ಡೆಂೆ ಜ್ವರದೆಡೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು. ಹೊಳಲ್ಕೆರೆ ತಾಲೂಕು ಮದ್ದೇರು ಹಾಗೂ ಚಿತ್ರದುರ್ಗ ತಾಲೂಕು ಮುದ್ದಾಪುರ ಗ್ರಾಪಂಗಳ ವ್ಯಾಪ್ತಿ ಡೆಂೆ ಪಾಸಿಟಿವ್ ಪ್ರಕರಣ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಗ್ರಾಪಂಗಳಿಗೆ ಶುಕ್ರವಾರ ಭೇಟಿ ನೀಡಿ ಅಧ್ಯಕ್ಷರು,ಸದಸ್ಯರು,ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಸೊಳ್ಳೆಗಳ ಉತ್ಪತ್ತಿ ತಾಣ ನಾಶ, ಸೊಳ್ಳೆ ಗಳ ಕಡಿತದಿಂದಾಗುವ ದುಷ್ಪರಿಣಾಮ,ಸೊಳ್ಳೆ ನಿಯಂತ್ರಣ ಕ್ರಮಗಳೆಡೆ ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ ಸರ್ವೆ ನಡೆಸಬೇಕು. ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಮೂಲಕ ಕೀಟಜನ್ಯ ರೋಗಗಳಿಗೆ ಕಡಿವಾಣ ಹಾಕ ಬೇಕೆಂದರು.
ಮಳೆಗಾಲವಾಗಿರುವುದರಿಂದ ತೆಂಗಿನ ಚಿಪ್ಪು,ನಿರುಪಯುಕ್ತ ಟೈರ್,ಕೋಳಿ ಮೊಟ್ಟೆ ಚಿಪ್ಪು, ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿ ಕೊಳ್ಳ ಬೇಕು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕೆಂದು,ನಾಗರಿಕರು ಸೊಳ್ಳೆ ಕಡಿತಕ್ಕೆ ಒಳಗಾದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿ ಸುವುದರೊಂದಿಗೆ,ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದರು.
ಜ್ವರ ಲಕ್ಷಣಗಳಿರುವ ಆರೋಗ್ಯ ಸ್ಥಿತಿ ಕುರಿತು 14 ದಿನಗಳ ಕಾಲ ವರದಿ ನೀಡಬೇಕು. ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್ ಕಿಟ್,ಔಷಧ ಲಭ್ಯ ತೆ ಖಚಿತ ಪಡಿಸಿಕೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಚಿತ್ರದುರ್ಗ ತಾಲೂಕು ಮುದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಪಂ ಯೋಜನಾ ನಿರ್ದೇಶಕ ಡಾ.ಎಸ್.ರಂಗಸ್ವಾಮಿ, ತಾಪಂ ಇಒಗಳಾದ ಎಸ್.ಶಿವಪ್ರಕಾಶ್,ಹನುಮಂತಪ್ಪ,ತಾಲೂಕು ಆರೋಗ್ಯ ಅಧಿಕಾರಿಗಳಾ ದ ಡಾ.ರೇಖಾ,ಡಾ.ಬಿ.ವಿ.ಗಿರೀಶ್,ತಾ.ಪಂ.ಸಹಾಯಕ ನಿರ್ದೇಶಕ ನಿರಂಜನ್,ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ರಂಜಿತಾ,ಗ್ರಾಂಪಂ ಅಧ್ಯಕ್ಷರಾದ ಯುವರಾಜ್,ಟಿ.ಮಂಗಳ,ಪಿಡಿಒಗಳಾದ ಮುರಳಿ,ಕೇಶವಮೂರ್ತಿ,ಸದಸ್ಯರು ಇದ್ದರು.