ಡೆಂಘೆಗೆ ನಿರ್ಲಕ್ಷೃ ಬೇಡ ಸೂಕ್ತ ಚಿಕಿತ್ಸೆ ನೀಡಿ

ydg1
ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೌಲಭ್ಯ ಕುರಿತು ಪರಿಶೀಲಿಸಿ, ವೈದ್ಯರೊಂದಿಗೆ ಚರ್ಚಿಸಿದರು. ಜಿಲ್ಲಾ ಸರ್ಜನ್ ಡಾ.ರೀಜ್ವಾನ್ ಆಫ್ರೀನ್ ಇತರರಿದ್ದರು.
Published on

ಯಾದಗಿರಿ: ರಾಜ್ಯ ಮಕ್ಕಳ ಹಕ್ಕುಗಳ ರP್ಷÀಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ನೇತೃತ್ವದ ತಂಡ ಗುರುವಾರ ಜಿಲ್ಲೆಯ ವಿವಿಧೆಡೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿತು.

ಯಾದಗಿರಿ, ಶಹಾಪುರ, ದೋರನಹಳ್ಳಿ ಮತ್ತು ಸುರಪುರ ತಾಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆ, ಶಾಲೆ, ಸ್ಕಾೃನಿಂಗ್ ಸೆಂಟರ್, ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ-ಗತಿಯನ್ನು ಕಣ್ಣಾರೆ ಕಂಡರು. ಕೆಲ ಸಮಸ್ಯೆಗಳನ್ನು ಕೂಡಲೇ ಸರಿಪಡಿಸುವಂತೆ ಸೂಚನೆ ನೀಡಿದರು. ಅಲ್ಲದೆ ಲೋಪದೋಷಗಳಿಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಸಂಬಂಧಿಸದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಬೆಳಗ್ಗೆ 8ಕ್ಕೆ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ ಅವರು, ತಾಯಿ ಮತ್ತು ಮಕ್ಕಳ ಘಟಕದಲ್ಲಿನ ತೀವ್ರ ನಿಗಾ ಘಟಕದಲ್ಲಿ ಕೇವಲ ವಾರ್ಮಸ್ ಮಾತ್ರವಿದೆ. ಎರಡು ವರ್ಷದಿಂದ 20 ವೆಂಟಿಲೇಟರ್ ಇದ್ದರೂ ಬೇರೆ ಕಡೆಗೆ ಯಾಕೆ ? ಕಳುಹಿಸುತ್ತಿದ್ದಿರಿ ಎಂದು ಪ್ರಶ್ನಿಸಿದರು. ಜಿ¯್ಲÉಯಲ್ಲಿ 350 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿz್ದÁರೆ. ಆದರೆ ಮಕ್ಕಳ ಪೌಷ್ಟಿಕ ಪುನಶ್ಚೇತನ ಘಟಕಕ್ಕೆ ರೆಫರ್ ಮಾಡುತ್ತಿಲ್ಲ. ಹಾಗಾಗಿ ಒಂದು ಮಗು ಕೂಡ ಈ ಕೇಂದ್ರದಲ್ಲಿ ದಾಖಲಾಗಿಲ್ಲ, ಇದು ಹೊರ ರೋಗ ವಿಭಾಗಕ್ಕೆ ದಾಖಲಾದ ಮಕ್ಕಳನ್ನು ಪೌಷ್ಟಿಕ ಪುನಶ್ಚೇತನ ಘಟಕದಲ್ಲಿಟ್ಟು ವೈದ್ಯಕೀಯ ಉಪಚಾರ ಮಾಡುತ್ತಿದ್ದು, ಇದು ಸರಿಯಾದ ಕ್ರಮವಲ್ಲ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಮಾತ್ರ ಈ ಘಟಕಕ್ಕೆ ದಾಖಲಿಸುವುದು ಸೂಕ್ತ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.

ಸರ್ಕಾರ ನೀಡಿರುವ ಸಲಕರಣೆ ಹಾಗೂ ಸಾಮಗ್ರಿಗಳನ್ನು ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಬಳಕೆ ಮಾಡುತ್ತಿz್ದÁರೆ. ಅವರಿಗೆ ಅದರ ಪರಿe್ಞÁನವಿಲ್ಲ. ಆದರೆ ಮೇಲುಸ್ತುವಾರಿ ಮಾಡುವವರು ಸರಿಯಾಗಿ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
9 ಮಕ್ಕಳಿಗೆ ಡೆಂಘೆ ಜ್ವರ ದೃಢಪಟ್ಟಿದ್ದು, ನಿರ್ಲಕ್ಷೃ ಮಾಡದೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆ, ವಸತಿ ಶಾಲೆ, ವಸತಿ ನಿಲಯಗಳು ಹಾಗೂ ಅಂಗನವಾಡಿಗಳಿಗೆ ರ್ಯಾಂಡಮï ಆಗಿ ತಪಾಸಣೆ ಮಾಡಿ ಡೆಂಘೆಗೆ ಯಾರೂ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು. ಈ ವೇಳೆ ಜಿಲ್ಲಾ ಸರ್ಜನ್ ಡಾ.ರೀಜ್ವಾನ್ ಆಫ್ರೀನ್ ಇತರರಿದ್ದರು.

ದೋರನಹಳ್ಳಿ ವರದಿ: ಹುಟ್ಟಿದ ಮಗುವು ಶಿP್ಷÀಣ ಪಡೆಯಬೇಕು ಮತ್ತು 0-18 ವರ್ಷದ ವರೆಗೆ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆರೋಗ್ಯ, ಪೌಷ್ಟಿಕ ಆಹಾರ, ಶಿP್ಷÀಣದ ಕೊರತೆಯಾಗಬಾರದು. ಹಾಗೊಂದು ವೇಳೆ ಕಂಡು ಬಂದಲ್ಲಿ ಆಯೋಗ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಅವರು, ಅಲ್ಲಿನ ಮಕ್ಕಳ ಹಾಜರಾತಿ ಪರಿಶೀಲನೆ ಮಾಡಿದರು. ನಂತರ ಶಿP್ಷÀಕರ ಹಾಜರಾತಿ ಪರಿಶೀಲನೆ ಮಾಡಿ, ಮುಂಜಾನೆ ಮತ್ತು ಮಧ್ಯಾಹ್ನ ಸಮಯದ ಶಿP್ಷÀಕರ ಸಹಿ ಒಟ್ಟಿಗೆ ಮಾಡಿದ್ದು, ಬಿಸಿಯೂಟ ಮಕ್ಕಳ ಸಂಖ್ಯೆಯ ಮಾಹಿತಿ ನೀಡಲು, ಅತಿಥಿ ಶಿP್ಷÀಕರ ಪೆÇಲೀಸ್ ವೆರಿಪಿಕೇಶನ್ ಕುರಿತು ಮಾಹಿತಿ ಕೇಳಿದಾಗ ತಡವರಿಸಿದ ಮುಖ್ಯಗುರು ಶಾಂತಪ್ಪ ಕೆರಟಗಿ ಅವರಿಗೆ ನೋಟಿಸ್ ನೀಡುವಂತೆ ಸಾರ್ವಜನಿಕ ಶಿP್ಷÀಣ ಇಲಾಖೆ ಉಪ ನಿರ್ದೇಶಕ ಬಸನಗೌಡ ಅವರಿಗೆ ಸೂಚಿಸಿದರು. ಇನ್ನೂ ಶಾಲೆಯಲ್ಲಿ ದಾಖಲಾತಿಗೆ ಅನುಗುಣವಾಗಿ 49 ಮಕ್ಕಳು ಇಲ್ಲ. ಕಾರಣ ಕೇಳಿದ ಅವರು, ಕೂಡಲೇ ಅವರನ್ನು ಶಾಲೆಗೆ ಕರೆತರುವ ಕೆಲಸ ಮಾಡಬೇಕು ಎಂದರು.

ನಂತರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳಿಗೆ ಸೂಕ್ತ ಶೌಚಗೃಹ ಇಲ್ಲದಿರುವುದು ಕಂಡು ಗ್ರಾಪಂ ಪಿಡಿಒ, ಸಿಇಒ ಅವರಿಗೆ ಪತ್ರ ಬರೆಯಲು ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಅಂಗನವಾಡಿ ಕೇಂದ್ರಗಳಿಗೂ ಭೇಟಿ ನೀಡಿ ಮಕ್ಕಳ ದಾಖಲಾತಿ ಪರಿಶೀಲಿಸಿದರು.

ವಿದ್ಯಾರಣ್ಯ ಶಾಲೆಗೆ ನೋಟಿಸ್: ಶಹಾಪುರ ವರದಿ: ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಕೋಸಂಬೆ, ತಿಂಗಳಿಗೆ ನೂರಾರು ಹೆರಿಗೆ ಆಗುವ ಕೇಂದ್ರದಲ್ಲಿ ಪ್ರತ್ಯೇಕ ಎನ್‍ಬಿಎಸ್‍ಯು ಘಟಕ ಇಲ್ಲ. ಅದರ ವ್ಯವಸ್ಥೆ ಮಾಡಬೇಕು ಎಂದು ಟಿಎಚ್‍ಒ ರಮೇಶ ಗುತ್ತೇದಾರ ಹಾಗೂ ವೈಧ್ಯಾಧಿಕಾರಿ ಡಾ.ಯಲ್ಲಪ್ಪ ಪಾಟೀಲï ಹುಲ್ಕಲï ಅವರಿಗೆ ಸೂಚಿಸಿದರು. ಪಟ್ಟಣದ 18 ಅನಧಿಕೃತ ತರಬೇತಿ ಕೇಂದ್ರ ಸೇರಿ ಪರವಾನಗಿ ರಹಿತ ಖಾಸಗಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ವಿದ್ಯಾರಣ್ಯ ಶಾಲೆಗೆ ನೋಟಿಸ್ ನೀಡುವಂತೆ ಉಪನಿರ್ದೇಶಕರು ಹಾಗೂ ಬಿಇಒ ಅವರಿಗೆ ಸೂಚಿಸಿದರು. ನಗರದ ನಾಲ್ಕು ಸ್ಕಾೃನಿಂಗ್ ಸೇಂಟರ್‍ಗೆ ಭೇಟಿ ನೀಡಿ ಭ್ರೂಣ ಪತ್ತೆ ಮತ್ತು ಹತ್ಯೆ ಕಾಯ್ದೆ ನಿಯಮ ಅಳವಡಿಸಿಲ್ಲ ಎಂದು ನಾಲ್ಕು ಕೇಂದ್ರಗಳು ಸೀಜ್ ಮಾಡುವಂತೆ ಸೂಚನೆ ನೀಡಿದರು.

ಸುರಪುರ ವರದಿ: ಅಪೌಷ್ಟಿಕತೆ ಆಧಾರದ ಮೇಲೆ 108 ಮಕ್ಕಳನ್ನು ಗುರುತಿಸಿದ್ದರೂ ಮಕ್ಕಳ ಪೌಷ್ಟಕ ಪುನಶ್ಚೇತನ ಕೇಂದ್ರದಲ್ಲಿ ಮಕ್ಕಳು ದಾಖಲಾಗದಿರುವುದು ಬೇಸರದ ಸಂಗತಿ. ಮಕ್ಕಳನ್ನು ದಾಖಲಿಸುವಲ್ಲಿ ಅಧಿಕಾರಿಗಳು ವಿಫಲವಾಗಿz್ದÁರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರP್ಷÀಣಾ ಆಯೋಗದ ಸದಸ್ಯ ಶಶಿಧರ್ ಕೋಸುಂಬೆ ಹೇಳಿದರು. ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಅವರು, ಮಕ್ಕಳ ಪೌಷ್ಟಕ ಪುನಶ್ಚೇತನ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಲ್ಲಿರುವ ಅಪೌಷ್ಟಕತೆ ಹೋಗಲಾಗಿಡಿಲಸು ಸರ್ಕಾರ ಯೋಜನೆ ರೂಪಿಸಿದೆ. ಆದರೆ ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಅಧಿಕಾರಿಗಳು ಈ ಕುರಿತು ಮುತುವರ್ಜಿ ವಹಿಸಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಪೆÇಲೀಸ್ ಠಾಣೆಯಲ್ಲಿ ಪ್ರತಿ ಗುರುವಾರ ಸಭೆ ನಡೆಸಿ ಮಕ್ಕಳ ಹಕ್ಕುಗಳ ರP್ಷÀಣೆ ಕುರಿತು ಜಾಗೃತಿ ಮೂಡಿಸಬೇಕು. ಬಾಲ ನ್ಯಾಯಾಲಯ ಸ್ಥಾಪಿಸುವಂತೆ ಆದೇಶವಿದ್ದರೂ ಯಾವುದೇ ರೀತಿ ಕ್ರಮ ಕೈಗೊಂಡಲ್ಲ ಎಂದು ಪೆÇಲೀಸ್ ಇಲಾಖೆಯ ನಿರ್ಲP್ಷÀ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ತಂಡದಲ್ಲಿ ಗೋವಿಂದ ರಾಠೋಡ್, ಪ್ರಭಾರಿ ಡಿಡಿಪಿಐ ಬಸನಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವೀರಣ್ಣಗೌಡ ಇದ್ದರು. ಡಾ. ಹರ್ಷವರ್ಧನ್, ಸಮಾಜ ಕಲ್ಯಾಣ ಅಧಿಕಾರಿಗಳಾದ ಸಲೀಂ, ಡಾ.ಶ್ರುತಿ, ಬಿಸಿಎಂ ವಿಸ್ತೀರ್ಣಾಧಿಕಾರಿ ತಿಪ್ಪಾರೆಡ್ಡಿ ಪಾಟೀಲï ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net