ಡೆಂಗೆ ಪ್ರತಿಬಂಧಕ ಲಸಿಕೆ ರಾಮಬಾಣ

1
ಮಲ್ಲಮ್ಮನ ಬೆಳವಡಿಯಲ್ಲಿ ಡೆಂ ಪ್ರತಿಬಂಧಕ ಲಸಿಕೆ ಹಾಕುವ ಶಿಬಿರಕ್ಕೆ ಈಶಪ್ರಭು ಶಿಣ ಸಂಸ್ಥೆಯ ಚೇರ್ಮನ್​ ಡಾ.ವಿಶ್ವನಾಥ ಪಾಟೀಲ ಚಾಲನೆ ನೀಡಿದರು. ಎಂ.ಎಂ.ಕಾಡೇಶನವರ, ನಿಂಗಪ್ಪ ಚೌಡಣ್ಣವರ, ಮಡಿವಾಳಪ್ಪ ಹೋಟಿ ಇತರರು ಇದ್ದರು.
Published on

ಬೈಲಹೊಂಗಲ: ಮಕ್ಕಳ ಆರೋಗ್ಯ ಹದಗೆಡಿಸುತ್ತಿರುವ ಡೆಂಗೆ ಪ್ರತಿಬಂಧಕ ಲಸಿಕೆ ರಾಮಬಾಣ ಎಂದು ಈಶಪ್ರಭು ಶಿಣ ಸಂಸ್ಥೆಯ ಚೇರ್ಮನ್​ ಡಾ.ವಿಶ್ವನಾಥ ಪಾಟೀಲ ಹೇಳಿದರು.

ತಾಲೂಕಿನ ಮಲ್ಲಮ್ಮನ ಬೆಳವಡಿಯ ಈಶಪ್ರಭು ಶಿಣ ಸಂಸ್ಥೆಯ ರಾಣಿ ಮಲ್ಲಮ್ಮ ಸಂಯುಕ್ತ ಪದವಿಪೂರ್ವ ಮತ್ತು ಪ್ರೌಢ, ಪ್ರಾಥಮಿಕ ಶಾಲೆಯ 8 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಶುಕ್ರವಾರ ಡೆಂ ಪ್ರತಿಬಂಧಕ ಲಸಿಕೆ ಹಾಕುವ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಡೆಂ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾವಿರಾರು ಮಕ್ಕಳು ಜ್ವರ, ಶೀತ, ನೆಗಡಿ, ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದು, ಡೆಂ ವ್ಯಾಪಕವಾಗಿ ಹರಡಿ ಹಲವೆಡೆ ಸಾವುಗಳೂ ಸಂಭವಿಸುತ್ತಿವೆ. ಆದ್ದರಿಂದ 8 ವರ್ಷದ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಡೆಂ ಪ್ರತಿಬಂಧಕ ಲಸಿಕೆ ಹಾಕಿಸಿ ಮುಂಜಾಗ್ರತೆ ವಹಿಸಬೇಕು. ಮನೆ ಮುಂದೆ ಮತ್ತು ಇತರೆಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿರಂತರ ಸ್ವಚ್ಛತಾ ಕ್ರಮಗಳಿಂದ ಕಾಯಿಲೆ ಬರದಂತೆ ತಡೆಯಬಹುದು ಎಂದು ಸಲಹೆ ನೀಡಿದರು.

ಸಂಸ್ಥೆ ಕಾರ್ಯದರ್ಶಿ ಎಂ.ಎಂ.ಕಾಡೇಶನವರ ಮಾತನಾಡಿದರು. ದೊಡವಾಡ ಗ್ರಾಮದ ವೀರಭದ್ರೇಶ್ವರ ಹಾಗೂ ಜ್ಞಾನಜ್ಯೋತಿ ಶಾಲೆಯ ಮಕ್ಕಳಿಗೂ ಡೆಂ ಪ್ರತಿಬಂಧಕ ಲಸಿಕೆ ಹಾಕಿಸಲಾಯಿತು. ನಿಂಗಪ್ಪ ಚೌಡಣ್ಣವರ, ಮಡಿವಾಳಪ್ಪ ಹೋಟಿ, ಶ್ರೀಶೈಲ ಯಡಳ್ಳಿ, ಆನಂದ ಮೂಗಿ, ಅಶೋಕ ಮಾರಿಹಾಳ,
ಎನ್​.ಎಂ. ಕರೀಕಟ್ಟಿ, ಚಂದನ ಕೌಜಲಗಿ, ಆದರ್ಶ ಗುಂಡಗೋವಿ, ಎಂ.ಪಿ. ಉಪ್ಪಿನ, ರಾಜು ದಳವಾಯಿ, ವಿಜ್ಞಾನ ಶಿಕ ಕೆ.ಬಿ.ಕಡೆಮನಿ, ಮುಖ್ಯ ಶಿಕಿ ಬಿ.ಆರ್​.ಹುತಮಲ್ಲಮನವರ, ದೈಹಿಕ ಶಿಕ್ಷಣ ಶಿಕ ಎಂ.ಸಿ.ಸಂಗೊಳ್ಳಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net