ಡೆಂಗಿಯಿಂದ ಬಾಲಕ ಸಾವು

DENGE
Published on

ಚಿಂಚೋಳಿ: ರಾಯಕೋಡ ಗ್ರಾಮದಲ್ಲಿ ಡೆಂಗಿಯಿಂದ ಬಾಲಕ ವಿಶ್ವನಾಥ ಕಲಶೆಟ್ಟಿ (9) ಮೃತಪಟ್ಟಿದ್ದಾನೆ.

ಡೆಂಗಿ ದೃಢಪಟ್ಟಿದ್ದ ಬಾಲಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ.25 ಶನಿವಾರ ಮೃಪಪಟ್ಟಿದ್ದಾನೆ ಎನ್ನಲಾಗಿದೆ.

‘ಗ್ರಾಮದಲ್ಲಿ ಮತ್ತೊಬ್ಬ ಬಾಲಕಿಗೆ ಡೆಂಗಿ ದೃಢಪಟ್ಟಿದ್ದು, ಆಕೆ ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖಳಾಗಿದ್ದಾಳೆ’ ಎನ್ನಲಾಗಿದೆ. ಗ್ರಾಮಕ್ಕೆ ವೈದ್ಯಾಧಿಕಾರಿ ಡಾ.ಮಂಜುನಾಥ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net