ಡೀಪ್‌ಫೇಕ್ ದೂರುಗಳೆಡೆ ನಿರ್ಲಕ್ಷೃ ಬೇಡ

Police Review meeting-3--05
Published on

ಚಿತ್ರದುರ್ಗ: ಡೀಪ್‌ಫೇಕ್ ತಂತ್ರಜ್ಞಾನದೊಂದಿಗೆ ಮಹಿಳೆಯರ ಮಾನ ಕಳೆಯುವ ಪ್ರಕರಣಗಳನ್ನು ನಿರ್ಲಕ್ಷೃ ವಹಿಸದಂತೆ ಅಧಿಕಾರಿ ಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಸೂಚಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲಿಸಿ ಮಾತನಾಡಿ, ಈ ಕುರಿತ ದೂರುಗಳನ್ನು ಕೂಡಲೇ ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕು ಎಂದರು.
ಧರ್ಮ, ಜಾತಿ ಹೆಸರಲ್ಲಿ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಪೋಸ್ಟ್ ಗಳೆಡೆ ನಿಗಾ ವಹಿಸಿ, ಸಮಾಜದಲ್ಲಿ ಶಾಂತಿ ಕಾಪಾಡಬೇಕು. ಹೆಚ್ಚುತ್ತಿರುವ ಸೈಬರ್‌ಕ್ರೈಂ ನಿಯಂತ್ರಿಸಬೇಕು. ಜನರಲ್ಲಿ ಮಾದಕ ವಸ್ತು ಸೇವನೆ ಅಪಾಯ ಹಾಗೂ ಸೈಬರ್ ಕ್ರೈಂ ಕುರಿತಂತೆ ಅರಿವು ಮೂಡಿಸಬೇಕು. ಅಪಘಾತಗಳ ಸ್ಥಳಗಳನ್ನು ಗುರುತಿಸಿ ನಿಯಂತ್ರಿಸಬೇಕು ಎಂದು ತಿಳಿಸಿದ ಸಚಿವರು, ಪ್ರತಿ ಜಿಲ್ಲೆಗೆ ಮತ್ತೊಬ್ಬ ಎಎಸ್‌ಪಿಯನ್ನು ನೇಮಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net