ಡಿಸೆಂಬರ್ ನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭ: ಡಿಸಿಎಂ ಗೋವಿಂದ ಕಾರಜೋಳ

IMG-20201130-WA0024
Published on

ವಿಜಯಪುರ: ಡಿಸೆಂಬರ್ ನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ ಎಂದು ಉಪ ಮುಖ್ಯ ಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಲೋಕೋಪಯೋಗಿ ಇಲಾಖೆ ಅನುದಾನದಡಿ ಕಾಮಗಾರಿ ಕೈಗೊಳ್ಳಲಾಗುತ್ತುದೆ. ಟೆಂಡರ್ ಪ್ರಕ್ರಿಯೆ ನಡೆದಿದೆ. ಹೀಗಾಗಿ ನಕಾರಾತ್ಮಕವಾಗಿ ಯೋಚಿಸೋದು ಬೇಡ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಪಾರ್ಲಿಮೆಂಟ್ ನಿಂದ ಪಂಚಾಯಿತಿ ಮಟ್ಟದವರೆಗೆ ಬಿಜೆಪಿ ಗೆಲ್ಲಬೇಕೆಂಬುದು ಬಿಜೆಪಿ ಗುರಿ. ದಕ್ಷಿಣ ಕರ್ನಾಟಕದಲ್ಲೂ ಬಿಜೆಪಿ ಗೆದ್ದಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸಹ

150 ಕ್ಕೂ ಅಧಿಕ ಸ್ಥಾನ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಮೋದಿ ಸರ್ಕಾರದ ಯೋಜನೆ: ದೇಶದಲ್ಲಿ 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಸಾಧನೆಗಿಂತ ಮೋದಿ ಸಾಧನೆ ನೂರಕ್ಕೂ ಅಧಿಕ. ಸ್ವಾತಂತ್ರ್ಯ ನಂತರ 1853 ಹಳ್ಳಿಗಳಿಗೆ ವಿದ್ಯುತ್ ಇರಲಿಲ್ಲ. ವರ್ಷದಲ್ಲಿಯೇ ಮೋದಿ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಾರೆ.

ಕರೊನಾ ಸಂಕಷ್ಟಕದಲ್ಲಿ 80 ಕೋಟಿ ಜನರಿಗೆ ಐದು ಕೇಜಿ ಅಕ್ಕಿ ಮತ್ತು ಬೇಳೆ ಉಚಿತವಾಗಿ ನೀಡಲಾಗಿದೆ. 12 ಕೋಟಿ ಕುಟುಂಬಕ್ಕೆ ಉಜ್ವಲ ಯೋಜನೆಯಡಿ ಎಲ್ ಪಿಜಿ ಸೌಲಭ್ಯ ಉಚಿತವಾಗಿ ಕಲ್ಪಿಸಿದೆ ಎಂದರು.

ಅಲ್ಲದೇ, ಪ್ರಧಾನ ಮಂತ್ರಿ ಜನಧನ ಯೋಜನೆಯಡಿ

38.33 ಕೋಟಿ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. 10 ಸಾವಿರ ರೈತ ಉತ್ಪನ್ನ ಸಂಸ್ಥೆಗಳಿಗೆ ಲಕ್ಷ ಕೋಟಿ ಅನುದಾನ ಬಜೆಟ್ ನಲ್ಲಿ ನೀಡಲಾಗಿದೆ. ರಾಷ್ಟ್ರದ ಲ್ಲಿ ಗುಳೆ ತಪ್ಪಿಸಲು ಒಂದು ದೇಶ ಒಂದು ಪಡಿತರ ಯೋಜನೆ ಜಾರಿಗೆ ತಂದಿತು. ಆ ಪ್ರಕಾರ ದೇಶದ ಯಾವುದೇ ರಾಜ್ಯದಲ್ಲಿ ಪಡಿತರ ಪಡೆಯಬಹುದಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ ಎರಡು ಕೋಟಿ ಮೂವತ್ಮೂರು ಲಕ್ಷ ಜನರಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿದೆ. ಎರಡು ಕೋಟಿ ಮನೆ, ಹತ್ತು ಕೋಟಿಗೂ ಅಧಿಕ ಶೌಚಗೃಹ ನಿರ್ಮಿಸಿದೆ. ಜನೌಷಧ ಮಳಿಗೆ ಸ್ಥಾಪಿಸಿದೆ. ಆಹಾರ ಭದ್ರತಾ ಯೋಜನೆ ಕಲ್ಪಿಸಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 22.53 ಕೋಟಿ ಜನರಿಗೆ ಸಾಲಸೌಲಭ್ಯ ಕಲ್ಪಿಸಿದೆ. ರೈತರ ಖಾತೆಗೆ ರಾಜ್ಯ ಸರ್ಕಾರದ ಅನುದಾನ ಸೇರಿಸಿ ಹತ್ತು ಸಾವಿರ ರೂ. ನೀಡಿದೆ.‌ಸಿರಿಧಾನ್ಯ ಬೆಳೆಯಲು ಎರಡನೂರು ಕೋಟಿ ರೂ. ಪ್ರೋತ್ಸಾಹ ಧನ ‌ನೀಡಿದೆ. ಹೀಗೆ ಹತ್ತು ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.

ನೆರೆ ಪರಿಹಾರ: ನೆರೆ ಹಾಗೂ ಅತೀವೃಷ್ಟಿಯಿಂದ ಮನೆ ಬೆಳೆ ಹಾನಿಗೀಡಾದ ರೈತರಿಗೆ ಪರಿಹಾರ ಕಲ್ಪಿಸಿದೆ. ಕರೊನಾ ಸಂದರ್ಭದಲ್ಲೂ ಕಡುಬಡವರಿಗೆ ರೂ. 5000 ನೀಡಿದೆ. ಒಟ್ಟಾರೆ ವರ್ಷದಲ್ಲಿ ಪ್ರಾಕೃತಿಕ ವಿಕೋಪಗಳಿಗಾಗಿ 2300 ಕೋಟಿ ರೂ. ಪ್ಯಾಕೇಜ್ ನೀಡಿದೆ ಎಂದರು.

ಗ್ರಾಮ ಸ್ವರಾಜ್: ಅಶ್ವತ್ಥ ನಾರಾಯಣ ಮಾತನಾಡಿ, ಮುಂದಿನ ಗ್ರಾಪಂ ಚುನಾವಣೆ, ತಾಪಂ ಹಾಗೂ ಜಿಪಂ ಚುನಾವಣೆ ಹಿನ್ನೆಲೆ ಗ್ರಾಮ ಸ್ವರಾಜ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಒಟ್ಟು ಆರು ತಂಡ ರಚಿಸಲಾಗಿದೆ. ನಳೀನಕುಮಾತ ಕಟೀಲ, ಡಿಸಿಎಂ ಗೋವಿಂದ ಕಾರಜೋಳ ಸೇರಿ ಹಲವರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿಯೊಬ್ಬರಿಗೂ ಐದಾರು ಜಿಲ್ಲೆ ನೀಡಿದ್ದು ಪ್ರತೀ ಜಿಲ್ಲೆಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಹೆಚ್ಚಿನ ಶಾಸಕರು ಹಾಗೂ ಸಂಸದರನ್ನು ಹೊಂದಿರುವ ಬಿಜೆಪಿಯಿಂದ ಗ್ರಾಮ ಮಟ್ಟದಲ್ಲೂ‌ ನಾಯಕತ್ವ ಬೆಳೆಸಲು ಯೋಜನೆ ರೂಪಿಸಲಾಗಿದೆ ಎಂದರು.

ಪ್ರಧಾನಿ ಮೋದಿ ಅವರು 14 ಮತ್ತು15 ನೇ ಹಣಕಾಸು ಯೋಜನೆಯಡಿ ಕೊಟ್ಟ ಅನುದಾನ, ಕುಡಿಯುವ ನೀರಿನ ಯೋಜನೆ, ಶೌಚಗೃಹ ನಿರ್ಮಾಣ, ಎರಡೂವರೆ ಸಾವಿರ ಪಿಡಿಒಗಳನ್ನು ನೇಮಕ ಮಾಡಿದ ಬಗ್ಗೆ ಜನರಿಗೆ ಮನದಟ್ಟು ಮಾಡಲು ತಂಡ ರೂಪಿಸಿದ್ದಾಗಿ ತಿಳಿಸಿದರು.

ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಪಿ.ರಾಜೀವ, ಕರ್ನಾಟ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಅಶ್ವತ್ಥ ನಾರಾಯಣ, ಎಂ.ಬಿ. ನಂದೀಶ, ಆರ್.ಎಸ್.‌ ಪಾಟೀಲ ಕೂಚಬಾಳ, ಚಂದ್ರಶೇಖರ ಕವಟಗಿ, ಗೂಳಪ್ಪ ಶಟಗಾರ, ಮಲ್ಲಮ್ಮ ಜೋಗೂರ, ದಯಾಸಾಗರ ಪಾಟೀಲ, ರವೀಂದ್ರ ಲೋಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net