ಡಿಸೆಂಬರ್ ತಿಂಗಳಲ್ಲಿ ‘ಮನೆ’ ಬಿಡುಗಡೆ

h21-Mane
Published on

ಹುಬ್ಬಳ್ಳಿ: ಗಾಯತ್ರಿ ಕ್ರಿಯೇಷನ್ಸ್ ಹಾಗೂ ಸಂಯುಕ್ತ ಸ್ಟುಡಿಯೋ ಸಹಯೋಗದಲ್ಲಿ ನಿರ್ವಣವಾಗಿರುವ ‘ಮನೆ’ ಚಲನಚಿತ್ರ ಸಂಪೂರ್ಣ ಮುಗಿದಿದ್ದು, ಡಿಸೆಂಬರ್ ತಿಂಗಳಲ್ಲಿ ತೆರೆಕಾಣಲಿದೆ ಎಂದು ಜಂಟಿ ನಿರ್ದೇಶಕರಾದ ಪೂರ್ಣಶ್ರೀ ಆರ್. ಮತ್ತು ರಶ್ಮಿ ಎಸ್. ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬುಧವಾರದಿಂದ ನಡೆಯಲಿದೆ. ಈ ಚಿತ್ರ ಕೌಟುಂಬಿಕ ಕಥಾ ಹಂದರವನ್ನು ಹೊಂದಿದೆ. ಒಬ್ಬ ಕಾರ್ವಿುಕ ಸ್ವಂತ ಮನೆ ಕಟ್ಟಿಕೊಳ್ಳಲು ಮುಂದಾದಾಗ ಹೇಗೆಲ್ಲ ತೊಂದರೆ ಅನುಭವಿಸುತ್ತಾನೆ ಎಂಬುದರ ಕುರಿತು ಇದೆ ಎಂದರು.

ರೇಣುಕುಮಾರ ಸಂಸ್ಥಾನಮಠ, ಪ್ರಮೀಳಾ ಸುಬ್ರಹ್ಮಣ್ಯಂ, ಸಾಗರ್ ಕೆ.ಎಚ್., ಅಕ್ಷತಾ ವಿಲಾಸ್, ನಲವಡಿ ಗ್ರಾಮದ ಮಂಜುನಾಥ ಪಾಟೀಲ, ವಿದ್ಯಾ ಪ್ರಭು ಗಂಜಿಹಾಳ, ಪ್ರಭು ಗಂಜಿಹಾಳ, ಅವಿನಾಶ ತಾರಾಗಣದಲ್ಲಿದ್ದಾರೆ. ಹುಬ್ಬಳ್ಳಿ, ಶಿರಗುಪ್ಪಿ, ನಲವಡಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 10 ದಿನಗಳವರೆಗೆ ಚಿತ್ರೀಕರಣ ನಡೆದಿದೆ. ಒಂದೂವರೆ ಗಂಟೆ ಸಿನಿಮಾದ ಕಾಲಾವಧಿ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net