

ಚಿತ್ರದುರ್ಗ: ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ,ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ಡಿಸೆಂಬರ್ 27ರಂದು ಚುನಾವಣೆ ನಡೆಯ ಲಿದೆ ಎಂದು ಮಹಾಸಭಾ ಚುನಾವಣಾಧಿಕಾರಿ ಎಚ್.ಎಂ.ರೇಣುಕ ಪ್ರಸನ್ನ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ರಾಜ್ಯದ 12 ಜಿಲ್ಲೆಗಳು ಮತ್ತು 106 ತಾಲೂಕುಗಳ ಘಟಕಗಳಿಗೆ ಚುನಾವಣೆ ನಡೆದಿದ್ದು, ಉಳಿದ ಜಿಲ್ಲೆ ಮತ್ತು ತಾಲೂಕು ಘಟಕಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು.
ಚುನಾವಣೆಗೂ ಮೊದಲು ಸಮಾಜ ಭಾಂಧವರು ಮಹಾಸಭಾಕ್ಕೆ ಸದಸ್ಯರಾಗಲು ನವೆಂಬರ್ 10ರವರೆಗೆ ಕಾಲಾವಕಾಶವಿದ್ದು, ನವೆಂಬರ್ 30ರಂದು ಅಂತಿಮ ಮತದಾರ ಪಟ್ಟಿ ಪ್ರಕಟವಾಗಲಿದೆ. ಡಿಸೆಂಬರ್ 12ರಂದು ನಾಮಪತ್ರ ಸ್ವೀಕಾರ,15 ಕೊನೆ ದಿನ, 15 ಪರಿಶೀಲನೆ,19 ಹಿಂಪಡೆಯುವ ಹಾಗೂ 27ರಂದು ಮತದಾನ ನಡೆಯಲಿದೆ ಹಾಗೂ ಅದೇ ದಿನ ಸಂಜೆ ಮತಗಳ ಎಣಿಕೆ ನಡೆಯಲಿದೆ ಎಂದರು.
ನಿಯಮಗಳಾನುಸಾರ ಜಿಲ್ಲಾಘಟಕಕ್ಕೆ ಚುನಾವಣೆ ನಡೆಯಲಿದೆ ಕನಿಷ್ಠ 1000 ಸದಸ್ಯರು ಇರಬೇಕು,ಪ್ರಸ್ತುತ ಚಿತ್ರದುರ್ಗ ಜಿಲ್ಲಾ ಘಟಕದಲ್ಲಿ 990 ಸದಸ್ಯರು ಇದ್ದಾರೆ. ಇನ್ನು ತಾಲೂಕು ಘಟಕಗಳಿಗೆ ಕನಿಷ್ಠ 300 ಸದಸ್ಯರು ಇರಬೇಕು. ಮೊಳಕಾಲ್ಮೂರು ತಾಲೂಕಿನಲ್ಲಿ 242,ಚಳ್ಳಕೆರೆ-211 ಹಾಗೂ ಹೊಳಲ್ಕೆರೆ ತಾಲೂಕಿನಲ್ಲಿ 165 ಸದಸ್ಯರಿದ್ದಾರೆ. ಮಹಾಸಭಾದ ಸದಸ್ಯತ್ವವನ್ನು ಪಡೆಯಲು ಸಮಾಜ ಬಾಂಧವರನ್ನು ಪ್ರೋತ್ಸಾಹಿಸುವಂತೆ ಮುಖಂಡರಲ್ಲಿ ಮನವಿ ಮಾಡಿದರು. ಚುನಾವಣೆ ನಡೆಯುವ ಸ್ಥಳವನ್ನು ನಂತರದಲ್ಲಿ ತಿಳಿಸಲಾಗುವು ದೆ ಂದು ಸ್ಪಷ್ಟಪಡಿಸಿದರು. ಮಹಾಸಭಾ ಪ್ರಮುಖರಾದ ಮಹಡಿಶಿವಮೂರ್ತಿ,ಆರತಿ ಶಿವಮೂರ್ತಿ,ವಿಜಯ ಕುಮಾರ್,ಗಿರೀಶ್, ಮೋಕ್ಷ, ವೀಣಾ,ಮಹಾಂತಮ್ಮ,ವೈ.ಚಂದ್ರಶೇಖರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.