ಡಿಸಿಸಿ ಬ್ಯಾಂಕ್‌ಗೆ ಸುಧಾಕರ್ ಸಾರಥಿ

CTD DCC BANK
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.0, 0.66028565);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
Published on

ಚಿತ್ರದುರ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಉಪಾಧ್ಯಕ್ಷರಾಗಿ ಎಚ್.ಬಿ.ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕ್ ಆಡಳಿತ ಮಂಡಳಿ 16 ನಿರ್ದೇಶಕರ ಪೈಕಿ 12 ಸ್ಥಾನಗಳಿಗೆ ಸೆ.12ರಂದು ಚುನಾವಣೆ ನಡೆದಿತ್ತು. ಸುಧಾಕರ್ ಸೇರಿ 7 ಮಂದಿ ಅವಿರೋಧ ಆಯ್ಕೆಯಾಗಿದ್ದರು. ನೂತನ ಆಡಳಿತ ಮಂಡಳಿ ಸದಸ್ಯರ ಮೊದಲ ಸಭೆಯನ್ನು ಸೋಮವಾರ ಬ್ಯಾಂಕ್‌ನಲ್ಲಿ ಆಯೋಜಿಸಲಾಗಿತ್ತು.
ಡಿ.ಸುಧಾಕರ ಹಾಗೂ ಮಂಜುನಾಥ್ ಅವರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿತ್ತು. ನಾಮಪತ್ರ ಹಿಂತೆಗೆತ ಅವಧಿ ಪೂರ್ಣಬಳಿಕ ಚುನಾವಣಾಧಿಕಾರಿ, ಎಸಿ ಎಂ.ಕಾರ್ತಿಕ್ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು.
ಸುಧಾಕರ್ ಮರು ಆಯ್ಕೆಯಿಂದಾಗಿ, ಅವರು ಅಧ್ಯಕ್ಷ ಸ್ಥಾನವನ್ನು 5ನೇ ಬಾರಿ ಅಲಂಕರಿಸಿದ್ದಾರೆ. ಉಪಾಧ್ಯಕ್ಷರಾಗಿ ಎಚ್.ಬಿ.ಮಂಜುನಾಥ್ ಕೂಡ ಮರು ಆಯ್ಕೆಯಾಗಿದ್ದಾರೆ.
*ವಹಿವಾಟು ವೃದ್ಧಿ ಗುರಿ: ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಸುಧಾಕರ್, ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ ಸಹಿತ ಜಿಲ್ಲೆ ಜನರಿಗೆ ಕೃಷಿ ಮತ್ತು ವಾಣಿಜ್ಯ ಸಾಲ ಒದಗಿಸುವ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಠೇವಣಿ ಸಂಗ್ರಹಿಸುವ ಮೂಲಕ ಬ್ಯಾಂಕ್ ವಹಿವಾಟನ್ನು ಇನ್ನಷ್ಟು ವೃದ್ಧಿಗೊಳಿಸುವುದು ಹೊಸ ಆಡಳಿತ ಮಂಡಳಿ ಗುರಿಯಾಗಿದೆ ಎಂದು ಹೇಳಿದರು.
ಪ್ರಸ್ತುತ 60 ಸಾವಿರ ರೈತರಿಗೆ ಕೃಷಿ ಸಾಲ ಒದಗಿಸಲಾಗುತ್ತಿದ್ದು, ಈ ಸಂಖ್ಯೆ ಇನ್ನಷ್ಟು ಹಾಗೂ ವಾಣಿಜ್ಯ ಸಾಲ ವಿತರಣೆ ಇನ್ನಷ್ಟು ಹೆಚ್ಚಿಸಲಾಗುವುದು. ಚುನಾವಣೆಗೆ ಅನರ್ಹವಾಗಿರುವ ಜಿಲ್ಲೆಯ 200ಕ್ಕೂ ಅಧಿಕ ಫ್ಯಾಕ್ಸ್‌ಗಳಿಂದ ಎನ್‌ಪಿಎ 30 ಕೋಟಿ ರೂ. ಗೆ ತಲುಪಿದೆ. 69 ವರ್ಷ ಇತಿಹಾಸವಿರುವ ಈ ಬ್ಯಾಂಕ್, ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳೆಂದು ವಿಭಜನೆ ಬಳಿಕ 2001ರಲ್ಲಿ ಪ್ರತ್ಯೇಕವಾಯಿತು. 2001ರಿಂದ 2004ರವರೆಗೆ ಬ್ಯಾಂಕ್ ಸೂಪರ್‌ಸೀಡ್ ಆಗಿತ್ತು ಎಂದರು.
ಪ್ರಥಮ ಬಾರಿಗೆ ಬ್ಯಾಂಕ್ ಅಧ್ಯಕ್ಷನಾದ ಬಳಿಕ ಕಳೆದ 20 ವರ್ಷಗಳಿಂದ ವಹಿವಾಟು ವೃದ್ಧಿಗೆ ಶ್ರಮಿಸಿದ್ದೇನೆ. 2004ರಲ್ಲಿದ್ದ ಬ್ಯಾಂಕ್ ದುಡಿಯುವ ಬಂಡವಾಳ ಪ್ರಸ್ತುತ 1246 ಕೋಟಿ ರೂ.ಗೆ ತಲುಪಿದೆ. 6 ಲಕ್ಷ ರೂ. ಇದ್ದ ಲಾಭ, 11 ಕೋಟಿ ರೂ.ಗೆ ಮುಟ್ಟಿದೆ. ಉತ್ತಮ ಕಾರ‌್ಯನಿರ್ವಹಣೆಯಲ್ಲಿ ನಮ್ಮ ಬ್ಯಾಂಕ್ 2017-18ಸಾಲಿನಲ್ಲಿ ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಪೈಕಿ ಹಾಗೂ 2021-22ನೇ ಸಾಲಿನಲ್ಲಿ ದೇಶದ 351 ಡಿಸಿಸಿ ಬ್ಯಾಂಕ್‌ಗಳಲ್ಲಿ 2ನೇ ಉತ್ತಮ ಕಾರ‌್ಯನಿರ್ವಹಣೆ ಬ್ಯಾಂಕ್ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ತಿಳಿಸಿದರು.
ಕೃಷಿ ಸಾಲದ ಮೇಲಿನ ಬಡ್ಡಿ ಸಬ್ಸಿಡಿಯನ್ನು ರಾಜ್ಯ ಸರ್ಕಾರ ಡಿಸಿಸಿ ಬ್ಯಾಂಕ್‌ಗಳಿಗೆ ಪಾವತಿಸುವುದು ವಿಳಂಬವಾಗುತ್ತಿದೆ. ಶೀಘ್ರ ಪಾವತಿಗೆ ಕ್ರಮಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಲಾಗಿದೆ. ನಬಾರ್ಡ್ ಆರ್ಥಿಕ ನೆರವು ಹೆಚ್ಚಳಕ್ಕೆ ಕೇಂದ್ರ ಮನಸ್ಸು ಮಾಡಬೇಕೆಂದರು.
ಎಂಡಿ ಇಲ್ಯಾಸ್ ಉಲ್ಲಾ ಷರೀಫ್, ನಿರ್ದೇಶಕರಾದ ಎಂ.ನಿಶಾನಿ ಜಯಣ್ಣ, ಕೆ.ಜಗಣ್ಣ, ಪಿ.ವಿನೋದಸ್ವಾಮಿ, ಎಚ್.ಎಂ.ದ್ಯಾಮಣ್ಣ, ರಘುರಾಮರೆಡ್ಡಿ, ಪಿ.ತಿಪ್ಪೇಸ್ವಾಮಿ, ಡಾ.ಕೆ.ಅನಂತ್, ಒ.ಮಂಜುನಾಥ್, ಸಿ.ವೀರಭದ್ರಬಾಬು, ಟಿ.ಮಹಾಂತೇಶ್, ಆರ್.ಎಸ್.ದಿಲೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net